ಉಡುಪಿ: ಸೈನಿಕರ ಕ್ಷೇಮ, ದೇಶದ ಸುರಕ್ಷೆಗೆ ಪ್ರಾರ್ಥಿಸಿ ಉಡುಪಿ(Udupi) ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ(Muchlukodu Subramanya Swamy Temple) ಸುದರ್ಶನ ಮಂತ್ರ ಯಾಗ ನಡೆಯಿತು.
ದೇಶದ ಗಡಿಭಾಗದಲ್ಲಿ ಶತ್ರುರಾಷ್ಟ್ರಗಳ ಸವಾಲುಗಳನ್ನೆದುರಿಸಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ದಿಟ್ಟತನದಿಂದ ದೇಶವನ್ನು ಕಾಯುತ್ತಾ ಸೈನಿಕರ ಯೋಗಕ್ಷೇಮ ಮತ್ತು ದೇಶದ ಸುರಕ್ಷೆ ಸಮೃದ್ಧಿಗಾಗಿ ಪ್ರಾರ್ಥಿಸಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಂಕಲ್ಪನಾನುಸಾರ ಈ ಯಾಗ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ
ಉಡುಪಿಯ ಪ್ರಾಚೀನ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಮಹಾಸುದರ್ಶನ ಮಂತ್ರ ಯಾಗ, ವಿದ್ವಾನ್ ಯಾಗ ಹೋಮ ನೆರವೇರಿದವು. ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಶ್ರೀಗಳು ದೇವ ಸೇನಾಧಿಪತಿಯಾದ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಡೆಸಿದ ಈ ಯಾಗದ ಪೂರ್ಣ ಶ್ರೇಯಸ್ಸು ದೇಶದ ಗಡಿಕಾಯುವ ಸೈನಿಕರ ಶ್ರೇಯಸ್ಸಿಗಾಗಿ ಮತ್ತು ದೇಶದ ಸುರಕ್ಷತೆಗಾಗಿ ಅರ್ಪಿಸೋಣ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ – ಬಿವೈ ವಿಜಯೇಂದ್ರ ಕಿಡಿ