ಭುವನೇಶ್ವರ: ಒಡಿಶಾ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಅದ್ಭುತ ಶಿಲ್ಪಕಲೆಗಳಿಂದ ನೆಟ್ಟಿಗರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಕಲೆಯಿಂದಲೇ ಎಲ್ಲರ ಗಮನ ಸೆಳೆಯುವುದರ ಜೊತೆಗೆ ವಿಶೇಷ ಗೌರವಗಳನ್ನು ಸ್ವೀಕರಿಸಿದ್ದಾರೆ.
Odisha: Sand artist Sudarsan Pattnaik created sand art at Puri beach amid the conflict between #RussiaUkraine (03.03) pic.twitter.com/PITVymSd9C
— ANI (@ANI) March 3, 2022
ಸದ್ಯ ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿಹೋಗಿದೆ ಮತ್ತು ಅಲ್ಲಿನ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದು, ಉಕ್ರೇನ್‍ನಲ್ಲಿ ಅನೇಕ ಸಾವು-ನೋವುಗಳು ಸಂಭವಿಸಿವೆ. ಈ ನಡುವೆ ಸುದರ್ಶನ್ ಪಟ್ನಾಯಕ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಅವರ ಭಾವಚಿತ್ರವನ್ನು ಮರಳಿನಲ್ಲಿ ರಚಿಸಿದ್ದಾರೆ. ಇದರ ಜೊತೆಗೆ ಯುದ್ಧ ನಿಲ್ಲಿಸಿ ಎಂಬ ಸಂದೇಶವನ್ನು ಬರೆದಿದ್ದಾರೆ.
My SandArt at Puri beach with message STOP WAR . #RussianUkrainianWar pic.twitter.com/sSg4fIN8f9
— Sudarsan Pattnaik (@sudarsansand) March 4, 2022
ಈ ಶಿಲ್ಪಕಲೆಯ ಫೋಟೋವನ್ನು ಸುದರ್ಶನ್ ಪಟ್ನಾಯಕ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಸ್ಟಾಪ್ ವಾರ್ ಎಂಬ ಸಂದೇಶದೊಂದಿಗೆ STOP WAR ಸಂದೇಶದೊಂದಿಗೆ ಪುರಿ ಬೀಚ್‍ನಲ್ಲಿರುವ ನನ್ನ ಸ್ಯಾಂಡ್‍ಆರ್ಟ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ
ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 4,000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್‍ಗಳು ಹರಿದುಬಂದಿದೆ. ಫೆಬ್ರವರಿ 24 ರಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಆರಂಭಿಸಿದ್ದು, ಇಲ್ಲಿಯವರೆಗೂ ಸುಮಾರು 28 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ