ಧಾರವಾಡ: ಫ್ಲೈ ಓವರ್ ಮೇಲಿಂದ ಬಿದ್ದು ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಧಾರವಾಡದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
Advertisement
ಧಾರವಾಡ ಹೊರವಲಯದ ನವಲೂರು ರೈಲ್ವೆ ನಿಲ್ದಾಣದ ಬಳಿಯ ಫ್ಲೈ ಓವರ್ ಮೇಲಿಂದ ಬಿದ್ದಿದ್ದ ಕೋತಿಗೆ ಹೊಟ್ಟೆಗೆ ಬಲವಾದ ಪೆಟ್ಟಾಗಿತ್ತು. ಇದರಿಂದ ಕೋತಿಯ ಹೊಟ್ಟೆಯಿಂದ ಕರಳುಗಳು ಹೊರಗೆ ಬಂದು ತೀವ್ರ ರಕ್ತಸ್ರಾವವಾಗಿ, ಕೋತಿ ನಿತ್ರಾಣ ಸ್ಥಿತಿ ಗಂಭೀರವಾಗಿತ್ತು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ವನ್ಯಜೀವಿ ಸಂರಕ್ಷಕ ಸೋಮಶೇಖರ್ ಚನ್ನಶೆಟ್ಟಿ ಹಾಗೂ ತಂಡದವರು ಆ ಕೋತಿಯನ್ನು ಹಿಡಿದುಕೊಂಡು ಪಶು ವೈದ್ಯ ಡಾ.ವಿನೀತ ಅವರ ಬಳಿ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ- 7 ಮಂದಿ ದುರ್ಮರಣ
Advertisement
Advertisement
ಡಾ.ವಿನೀತ ಅವರು ಆ ಕೋತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ 15 ಹೊಲಿಗೆಯನ್ನು ಹಾಕಿದ್ದಾರೆ. ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ ಆ ಕೋತಿಯನ್ನು ಅರಣ್ಯ ಇಲಾಖೆಯ ಕೊಠಡಿಯಲ್ಲಿ ಆರೈಕೆ ಮಾಡಲಾಗುತ್ತಿದೆ. ಸದ್ಯ ಕೋತಿ ನೀರು ಕುಡಿಯುತಿದ್ದು, ಇನ್ನು ಮೂರು ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿದೆ. ಇದನ್ನೂ ಓದಿ: ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ