ಚೆನ್ನೈ: ಯುದ್ಧದಲ್ಲಿ ಚೀನಾವನ್ನು ಸೋಲಿಸುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಸುಬ್ರಮಣಿಯನ್ ಸ್ವಾಮಿ ಭಾಗವಹಿಸಿದ್ದರು. ಈ ವೇಳೆ The Chinese Model Can India Catch Up? ಎಂದು ಪ್ರಶ್ನೆಯನ್ನು ಕೇಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ನಾನು ಅವರನ್ನು ಹಿಡಿಯಲು ಬಯಸುವುದಿಲ್ಲ, ನಾನು ಅವರನ್ನು ಹಿಂದಿಕ್ಕಲು ಬಯಸುತ್ತೇನೆ ಎಂದರು. ಇದನ್ನೂ ಓದಿ: ಯುದ್ಧ ನಿಲ್ಲಿಸಲು 2 ಷರತ್ತುಗಳನ್ನು ಉಕ್ರೇನ್ ಮುಂದಿಟ್ಟ ರಷ್ಯಾ
Advertisement
ಸ್ವಾಮಿಯವರು ಚಿಂಗ್ ರಾಜವಂಶಕ್ಕೂ ಮೊದಲು, 2,000 ವರ್ಷಗಳಿಗಿಂತಲೂ ಹೆಚ್ಚು ಕಾಲ, ಚೀನಾ ಭಾರತದ ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗಿತ್ತು. ಚೀನಾದಲ್ಲಿ ಅದು ಸರ್ವಾಧಿಕಾರವಾಗಿದೆ. ನಾನು ಅದನ್ನು ಅನುಸರಿಸಲು ಬಯಸುವುದಿಲ್ಲ. ನಾವು ನಿಜವಾಗಿಯೂ ಯುದ್ಧದಲ್ಲಿ ಚೀನಾವನ್ನು ಸೋಲಿಸಲು ನಿರ್ಧರಿಸಬೇಕು. ಅದು ಸಂಭವಿಸಿದರೆ, ಇಡೀ ಜಗತ್ತು ನಮ್ಮನ್ನು ಬೆಂಬಲಿಸುತ್ತದೆ. ನಮ್ಮಲ್ಲಿ ಮಾತ್ರ ಈ ಸಾಮರ್ಥ್ಯ ವಿದ್ದು ನಮ್ಮ ಯೋಧರ ಆತ್ಮಸ್ಥೈರ್ಯ ಆಗಾದವಾಗಿದೆ ಎಂದರು. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್ʼ ಹೀರೋ
Advertisement
Advertisement
ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಸ್ವಾಮಿ, ಭಾರತದ ಒಂದಿಂಚು ಭೂಮಿಯನ್ನು ಚೀನಿಯರು ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿ ಮೋದಿ ಚೀನಿಯರ ವಿರುದ್ಧ ಹೋರಾಡುತ್ತಿದ್ದಾರೆಯೇ? ಚೀನಿಗರು 4,000 ಚದರ ಕಿಮೀ ಆಕ್ರಮಿಸಿಕೊಂಡಾಗ ಮೋದಿ ಚೀನಾ ಸೇನೆ ನಮ್ಮ ಪ್ರದೇಶದೊಳಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.