ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈಬಿಟ್ಟ ನಂತರ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಟ್ವಿಟ್ಟರ್ ಖಾತೆಯಿಂದ ಪಕ್ಷದ ಹೆಸರನ್ನು ತೆಗೆದು ಹಾಕಿದ್ದಾರೆ.
Advertisement
ಸುಬ್ರಮಣಿಯನ್ ಸ್ವಾಮಿ ಅವರ ಟ್ವಿಟ್ಟರ್ ಖಾತೆಯಲ್ಲಿ ಯಾವಾಗಲೂ ಪಕ್ಷದ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೀಗ ಅದನ್ನು ತೆಗೆದುಹಾಕಲಾಗಿದೆ. ರಾಜ್ಯಸಭಾ ಸಂಸದ, ಮಾಜಿ ಕೇಂದ್ರ ಕ್ಯಾಬಿನೆಟ್ ಮಂತ್ರಿ, ಅರ್ಥಶಾಸ್ತ್ರದಲ್ಲಿ ಹಾರ್ವರ್ಡ್ ಪಿಎಚ್‍ಡಿ ಪಡೆದು ಪ್ರೋಫೆಸರ್ ಆಗಿರುವ ನಾನು ಪಡೆದ ಒಳ್ಳೆಯನ್ನು ನೀಡುತ್ತೇನೆ ಎಂದು ಈ ಮುನ್ನ ಹೇಳಿದ್ದರು. ಅಲ್ಲದೇ ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಗಳ ಪ್ರಬಲ ವಿಮರ್ಶಕರಾಗಿದ್ದರು. ಇದನ್ನೂ ಓದಿ: ಯುಕೆ ಮಾರ್ಗಸೂಚಿ ಬದಲಾವಣೆ – ಅ.11ರಿಂದ ಲಸಿಕೆ ಪಡೆದ ಭಾರತಿಯರಿಗಿಲ್ಲ ಕ್ವಾರಂಟೈನ್
Advertisement
Advertisement
ಇದೀಗ ಜೆಪಿ ನಡ್ಡಾ ಅವರು ಬಿಜೆಪಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಷ್ಟ್ರೀಯ ಸಮಿತಿಯನ್ನು ಪುನಾರಚನೆ ಮಾಡಿದ್ದು, 80 ಸದಸ್ಯರನ್ನು ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ನೇಮಕ ಮಾಡಲಾಗಿದೆ. ಅದರಲ್ಲಿ ಕೃಷಿ ಕಾನೂನುಗಳು ಮತ್ತು ಲಖಿಂಪುರ್ ಖೇರಿ ಹಿಂಸಾಚಾರದ ಸಂದರ್ಭದಲ್ಲಿ ಕೇಂದ್ರದ ನೀತಿಗಳ ವಿರುದ್ಧ ಧ್ವನಿಯೆತ್ತಿದ ವರುಣ್ ಗಾಂಧಿ ಮತ್ತು ತಾಯಿ ಮೇನಕಾ ಗಾಂಧಿ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಕೈಬಿಡಲಾಗಿದೆ. ಅದರಲ್ಲಿ ಬಿಜೆಪಿ ಹಿರಿಯ ನಾಯಕರಾಗಿರುವ ಸುಬ್ರಮಣಿಯನ್ ಸ್ವಾಮಿ ಕೂಡ ಒಬ್ಬರಾಗಿದ್ದಾರೆ. ಇದನ್ನೂ ಓದಿ: ಶಬರಿಮಲೆ ಪ್ರತಿದಿನ 25 ಸಾವಿರ ಭಕ್ತರ ದರ್ಶನಕ್ಕೆ ಅವಕಾಶ
Advertisement
Days after comments on Lakhimpur Kheri, Varun Gandhi, Maneka excluded from BJP’s national executive council
Read @ANI Story | https://t.co/ErFGa0CLPK pic.twitter.com/LqHGHA963v
— ANI Digital (@ani_digital) October 7, 2021
ಕೇಂದ್ರ ಸಚಿವರಾದ ರಾವ್ ಇಂದ್ರಜಿತ್ ಸಿಂಗ್ ಮತ್ತು ಪ್ರಹ್ಲಾದ್ ಪಟೇಲ್, ಸುರೇಶ್ ಪ್ರಭು, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಪುತ್ರ ದುಷ್ಯಂತ್ ಸಿಂಗ್, ವಿಜಯ್ ಗೋಯಲ್, ವಿನಯ್ ಕಟಿಯಾರ್ ಮತ್ತು ಎಸ್ ಎಸ್ ಅಹ್ಲುವಾಲಿಯಾ ಸೇರಿದಂತೆ ಹಲವರ ಹೆಸರನ್ನು ಹೊಸ ಸಮಿತಿಯಿಂದ ಹೊರಗಿಡಲಾಗಿದೆ.