`ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

Public TV
1 Min Read
raj b shetty

ಟ, ನಿರ್ದೇಶಕ, ನಿರ್ಮಾಪಕ ರಾಜ್ ಬಿ ಶೆಟ್ಟಿ (Raj B Shetty) ಇನ್ನು ಹಲವು ದಿನಗಳ ಕಾಲ ಇನ್‌ಸ್ಟಾಗ್ರಾಂನಿಂದ ದೂರ ಇರೋದಾಗಿ ಘೋಷಣೆ ಮಾಡಿದ್ದಾರೆ. ಹಾಗಂತ ಇನ್‌ಸ್ಟಾದಿಂದ ಪರ್ಮನೆಂಟ್‌ ಆಗಿ ದೂರಾಗ್ತೀನಿ ಅಂತ ಅವರು ಹೇಳಿಲ್ಲ. ಕೆಲಸದ ಮೇಲೆ ಗಮನ ಹರಿಸಬೇಕಾಗಿದೆ, ಸದ್ಯಕ್ಕೆ ಇನ್‌ಸ್ಟಾದಿಂದ ದೂರ ಇರ್ತೀನಿ, ಇನ್ಮುಂದೆ ನನ್ನ ತನ್ನ ಟೀಮ್ ಇದನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.

vcbcvbc

ಸು ಫ್ರಂ ಸೋ (Su From So) ಚಿತ್ರದ ಮೂಲಕ ಇತ್ತೀಚೆಗೆ ಭಾರಿ ಟ್ರೆಂಡ್‌ನಲ್ಲಿರೋ ಸ್ಟಾರ್ ರಾಜ್ ಬಿ ಶೆಟ್ಟಿ, ಸದಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಎಂಗೇಜ್ ಆಗಿರೋ ವ್ಯಕ್ತಿತ್ವದವರು ಅಲ್ಲ. ಆದರೂ ಆಗಾಗ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡ್ತಿದ್ದ ಶೆಟ್ರು ಇದೀಗ ಆ ಕಾಯಕಕ್ಕೂ ಬ್ರೇಕ್ ಹಾಕೋದಾಗಿ ಪೋಸ್ಟ್ ಮೂಲಕವೇ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಮತ್ತೊಂದು ಚಿತ್ರದ ತಯಾರಿಯಲ್ಲಿರುವ ರಾಜ್, ಅದಕ್ಕಾಗಿ ಸ್ಕ್ರಿಪ್ಟ್ ಮಾಡಬೇಕಾದ ಕಾರಣಕ್ಕೆ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಾಮೆಂಟ್ – 5 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ FIR

ಅನುಶ್ರೀ ಮದುವೆಯಲ್ಲಿ ರಾಜ್ ಬಿ ಶೆಟ್ಟಿ ಕಾಣಿಸ್ಕೊಂಡ್ರು. ಇದೀಗ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿ ಕೆಲಸದೊಂದಿಗೆ ಮರಳಲಿದ್ದಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಿಂದ ದೂರ ಇರ್ತೀನಿ ಅಂತ ಅಧಿಕೃತ ಘೋಷಣೆ ಮಾಡಿರುವ ಶೆಟ್ರಿಗೆ ಭಾರೀ ಶುಭಾಷಯದ ಸುರಿಮಳೆ ಬರ್ತಿದೆ. ಮತ್ತೊಂದು ಒಳ್ಳೆಯ ಸಿನಿಮಾದೊಂದಿಗೆ ವಾಪಸ್ಸಾಗಿ ಎಂಬ ಕಾಮೆಂಟ್ಸ್ ಬಂದಿದೆ. ಜೊತೆಗೆ ಸು ಫ್ರಂ ಸೋ ನೂರು ಕೋಟಿ ಕಲೆಕ್ಷನ್ ಮಾಡಿರೋದಕ್ಕೆ ಶೆಟ್ರು ದುಡ್ಡು ಎಣಿಸೋಕೆ ಹೋಗ್ತಿರಬೇಕು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಏನೇ ಇದ್ರೂ ರಾಜ್ ಬಿ ಶೆಟ್ಟಿ ಆಲೋಚನೆ ವಿಭಿನ್ನವಾಗಿಯೇ ಇರುತ್ತದೆ.

Share This Article