ಚಂಡೀಗಢ: ಪಂಜಾಬ್‌ನ (Punjab) ಗುರುದಾಸ್‌ಪುರ ಜಿಲ್ಲೆಯಲ್ಲಿ ನಡೆದ ಕ್ರೀಡಾ ಉತ್ಸವವೊಂದರಲ್ಲಿ ಸ್ಟಂಟ್‌ಮ್ಯಾನ್ (Stuntman) ಒಬ್ಬರು ಟ್ರ‍್ಯಾಕ್ಟರ್‌ನಡಿ ಸಿಲುಕಿಸಿ ಭೀಕರವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಿಂದ ಎಚ್ಚೆತ್ತ ಪಂಜಾಬ್ ಸರ್ಕಾರ ಸೋಮವಾರ ಯಾವುದೇ ರೀತಿಯ ಸ್ಟಂಟ್ ಅಥವಾ ಟ್ರ‍್ಯಾಕ್ಟರ್‌ನೊಂದಿಗೆ ಅಪಾಯಕಾರಿ ಸಾಹಸ ಪ್ರದರ್ಶನ ನೀಡುವುದನ್ನು ನಿಷೇಧಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann), ಪ್ರಿಯ ಪಂಜಾಬಿಗಳೇ, ಟ್ರಾಕ್ಟರ್ ಅನ್ನು ಗದ್ದೆಗಳ ರಾಜ ಎಂದು ಕರೆಯಲಾಗುತ್ತದೆ. ಆದರೆ ಅದನ್ನು ಸಾವಿನ ದೇವತೆಯನ್ನಾಗಿ ಮಾಡಬೇಡಿ. ಟ್ರಾಕ್ಟರ್ ಮತ್ತು ಸಂಬಂಧಿತ ಉಪಕರಣಗಳೊಂದಿಗೆ ಯಾವುದೇ ರೀತಿಯ ಸಾಹಸ ಅಥವಾ ಅಪಾಯಕಾರಿ ಪ್ರದರ್ಶನವನ್ನು ಪಂಜಾಬ್‌ನಲ್ಲಿ ನಿಷೇಧಿಸಲಾಗಿದೆ. ಈ ಸಂಬಂಧ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಹೇಳಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ಪಂಜಾಬ್‌ನ ಗುರುದಾಸ್‌ಪುರದ ಬಟಾಲಾದಲ್ಲಿ ನಡೆದ ಜಾತ್ರೆಯಲ್ಲಿ ಸಾಹಸ ಪ್ರದರ್ಶಿಸುತ್ತಿದ್ದ 29 ವರ್ಷದ ಸ್ಟಂಟ್‌ಮ್ಯಾನ್‌ನ ಮೇಲೆ ಟ್ರ‍್ಯಾಕ್ಟರ್ (Tractor) ಹರಿದು ಸಾವನ್ನಪ್ಪಿದ್ದಾರೆ. ಸ್ಟಂಟ್‌ಮ್ಯಾನ್ ಅನ್ನು ಸುಖ್ಮನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಕ್ರೀಡಾ ಉತ್ಸವದ ಸಮಯದಲ್ಲಿ ಸಾಹಸ ಪ್ರದರ್ಶಿಸುತ್ತಿದ್ದ ಟ್ರ್ಯಾಕ್ಟರ್‌ನ ಅಡಿಗೆ ಸಿಲುಕಿ ಭೀಕರವಾಗಿ ಸಾವನ್ನಪ್ಪಿದ್ದಾರೆ. ದುರ್ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಪ್ರಚಾರದ ವೇಳೆ ಬಿಆರ್‌ಎಸ್ ಸಂಸದನಿಗೆ ಚಾಕು ಇರಿತ
Advertisement
Advertisement
ವೀಡಿಯೋದಲ್ಲೇನಿದೆ?
ಸರಚೂರು ಗ್ರಾಮದ ಕ್ರೀಡಾ ಮೈದಾನದಲ್ಲಿ ನಡೆಯುತ್ತಿದ್ದ ಉತ್ಸವದಲ್ಲಿ ಸಾಹಸ ಪ್ರದರ್ಶಿಸಲು ಸುಖ್ಮನ್‌ದೀಪ್ ಸಿಂಗ್ ತಮ್ಮ ಟ್ರ‍್ಯಾಕ್ಟರ್‌ನೊಂದಿಗೆ ಆಗಮಿಸಿದ್ದರು. ಅವರು ತಮ್ಮ ಟ್ರಾಕ್ಟರ್‌ನ ಮುಂಭಾಗದ ಚಕ್ರಗಳನ್ನು ಮೇಲಕ್ಕೆತ್ತಿ, ಹಿಂಬದಿಯ ಟೈರ್‌ಗಳನ್ನು ನೆಲದ ಮೇಲೆ ಒತ್ತಿ, ಮತ್ತು ಟ್ರ‍್ಯಾಕ್ಟರ್‌ನೊಂದಿಗೆ ಓಡಲು ಪ್ರಾರಂಭಿಸಿದ್ದರು. ಆದರೆ ಟ್ರ‍್ಯಾಕ್ಟರ್ ನಿಯಂತ್ರಣ ತಪ್ಪಿ ಜನರತ್ತ ಓಡಲಾರಂಭಿಸಿತು. ಸುಖ್ಮನ್‌ದೀಪ್ ಅದರ ನಿಯಂತ್ರಣ ಸಾಧಿಸಲು ಟ್ರ‍್ಯಾಕ್ಟರ್ ಬಳಿ ಬಂದಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಟ್ರ‍್ಯಾಕ್ಟರ್‌ನ ಅಡಿಗೆ ಅವರು ಸಿಲುಕಿದ್ದಾರೆ. ಮೈದಾನದಲ್ಲಿದ್ದ ಇಬ್ಬರು ಟ್ರ‍್ಯಾಕ್ಟರ್ ಅಡಿಯಲ್ಲಿ ಸಿಲುಕಿದ್ದ ಸುಖ್ಮನ್‌ದೀಪ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭಾರತದ ನೆಲದಲ್ಲಿ ಹಮಾಸ್ ಕಾರ್ಯಕ್ರಮ ಬೇಕಿತ್ತಾ? – ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ
Web Stories