ಸೋರೆಕಾಯಿ ತರಕಾರಿಗಳಲ್ಲಿ ಒಂದಾಗಿದೆ. ಈ ತರಕಾರಿಯನ್ನು ಅನೇಕರು ಇಷ್ಟಪಡುವುದಿಲ್ಲ. ಆದರೆ ಇದು ಬೇಸಿಗೆ ಸಮಯದಲ್ಲಿ ನೀರಿನಾಂಶ ಕೊಡಲು ತುಂಬಾ ಸಹಾಯ ಮಾಡುತ್ತೆ. ಅದಕ್ಕೆ ಎಲ್ಲರಿಗೂ ಇಷ್ಟವಾಗುವ ಈಗಿನ ಟ್ರೆಂಡಿಗೆ ತಕ್ಕಂತೆ ಸೋರೆಕಾಯಿಯಲ್ಲಿ ವಿಶೇಷ ರೆಸಿಪಿಯೊಂದು ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು:
* ಸೋರೆಕಾಯಿ – 1
* ನಿಂಬೆ ರಸ – 50 ಮಿಲಿ
* ಮೆಣಸಿನ ಪುಡಿ – 1/2 ಟೀ ಸ್ಪೂನ್
* ಗರಂ ಮಸಾಲಾ – 2 ಟೀಸ್ಪೂ
* ಎಣ್ಣೆ – 2 ಟೀಸ್ಪೂನ್
* ಜೀರಿಗೆ – 1/2 ಟೀಸ್ಪೂನ್
* ಕತ್ತರಿಸಿದ ಈರುಳ್ಳಿ – 1 ಕಪ್
* ಕತ್ತರಿಸಿದ ಟೊಮೆಟೋ – ಕಪ್
* ಹಸಿರು ಮೆಣಸಿನಕಾಯಿ – 3
* ಶುಂಠಿ ಪೇಸ್ಟ್ – 1 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು ಇದನ್ನೂ ಓದಿ: ಬೇಸಿಗೆಗೆ ತಂಪಾದ ಸೋಲ್ ಕಡಿ ಅಥವಾ ಕೋಕಮ್ ಡ್ರಿಂಕ್ ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಸೋರೆಕಾಯಿ ಸಿಪ್ಪೆ, ಬೀಜ ತೆಗೆದು, ಮಧ್ಯಕ್ಕೆ ಎರಡು ಭಾಗ ಮಾಡಿ ನೀರಿನಲ್ಲಿ ಕುದಿಸಿ.
* ಒಂದು ಪ್ಯಾನ್‍ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ, ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
Advertisement
* 5 ನಿಮಿಷಗಳ ಕಾಲ ಹಾಗೇ ಬಿಡಿ.
* ನಂತರ ಬೇಯಿಸಿದ ಸೋರೆಕಾಯಿ ಒಳಗೆ ಪ್ಯಾನ್‍ನಲ್ಲಿರುವ ಪೇಸ್ಟ್ ತುಂಬಿ.
* ಕೊನೆಯಾದಾಗಿ ಪುದೀನಾ/ಕೊತ್ತಂಬರಿಯಿಂದ ಅಲಂಕಾರ ಮಾಡಿ ಬಡಿಸಿ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್