ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲ ಕಾಲೇಜಿನಲ್ಲಿ ಇಂದು ಕೂಡ 12 ಮಂದಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಆಗಮಿಸಿದ್ದರು. ಆದರೆ ಹಿಜಬ್ ತೊಟ್ಟು ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದ ಹಿನ್ನೆಲೆ 12 ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಹಿಜಬ್ ವಿವಾದ ಮತ್ತೆ ಭುಗಿಲೆದ್ದಿದೆ. 12 ಮಂದಿ ಹಿಜಬ್ ವಿದ್ಯಾರ್ಥಿನಿಯರು ಇಂದು ಕಾಲೇಜಿಗೆ ಹಿಜಬ್ ಧರಿಸಿ ಬಂದಿದ್ದರು. ನಂತರ ಗ್ರಂಥಾಲಯಕ್ಕೆ ತೆರಳಿದ 12 ಮಂದಿ ಹಿಜಬ್ ವಿದ್ಯಾರ್ಥಿನಿಯರನ್ನು ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದೇ ಪ್ರಾಂಶುಪಾಲ ಅನುಸೂಯ ರೈ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಆಡಳಿತ ಮಂಡಳಿ ಎಚ್ಚರಿಕೆಗೆ ಡೋಂಟ್‍ಕೇರ್- ಹಿಜಬ್ ಧರಿಸಿ ಬಂದ 15 ವಿದ್ಯಾರ್ಥಿನಿಯರು!
ಕಾಲೇಜಿನಲ್ಲಿ ಹಿಜಬ್‍ಗಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ನಂತರ ಹೊರಗೆ ತೆರಳಿ ಮನೆಗೆ ಹಿಂದಿರುಗಿದ್ದಾರೆ. ಸದ್ಯ ಡಿಸಿ ಕಚೇರಿಗೆ ಭೇಟಿ ನೀಡಿ ಹಿಜಬ್ ಧರಿಸಿ ಕಾಲೇಜಿಗೆ ತೆರಳಲು ಅನುಮತಿ ನೀಡುವಂತೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ತರಗತಿ, ಗ್ರಂಥಾಲಯಕ್ಕೂ ಹಿಜಬ್ ಧರಿಸಿ ಬರುವಂತಿಲ್ಲ- ವಿವಾದದ ಬಳಿಕ ಮಂಗಳೂರು ವಿವಿ ಖಡಕ್ ಆದೇಶ