ಪಾಟ್ನಾ: ಬಿಹಾರದಲ್ಲಿ ಆಗಿರುವ ಪ್ರವಾಹದಿಂದ ಜನರು ತತ್ತರಿಸುತ್ತಿದ್ದಾರೆ. ಈ ನಡುವೆ ಯುವತಿಯೊಬ್ಬಳು ಪ್ರವಾಹದ ನೀರಿನಲ್ಲಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅದಿತಿ ಸಿಂಗ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ನಿಫ್ಟ್)ನ ವಿದ್ಯಾರ್ಥಿನಿ. ಅದಿತಿ ನಡುರಸ್ತೆಯಲ್ಲಿಯೇ ಪ್ರವಾಹದ ನೀರಿನಲ್ಲಿ ಫೋಟೋಶೂಟ್ ಮಾಡಿಸಿದ್ದಾಳೆ. ಸದ್ಯ ಆಕೆಯ ಫೋಟೋವನ್ನು ಫೋಟೋಗ್ರಾಫರ್ ಸುರಭ್ ಅನುರಾಜ್ ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ಬಿಹಾರದಲ್ಲಿ ಈಗಿನ ಸ್ಥಿತಿಯನ್ನು ವಿಭಿನ್ನವಾಗಿ ತೋರಿಸಲು ಸುರಭ್ ಈ ಫೋಟೋಶೂಟ್ ಮಾಡಿದ್ದಾರೆ. ಅಲ್ಲದೆ ‘ಮರ್‌ಮೇಡ್ ಇನ್ ಡಿಸಾಸ್ಟರ್’ ಟೈಟಲಿನಲ್ಲಿ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಕೆಲವರು ಸುರಭ್ ಅವರ ಕಾನ್ಸೆಪ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ನೈಸರ್ಗಿಕ ವಿಪತ್ತನ್ನು ವೈಭವೀಕರಿಸುತ್ತದೆ ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಸುರಭ್ ತಮ್ಮ ಫೇಸ್‍ಬುಕ್‍ನಲ್ಲಿ, “ಪಾಟ್ನಾದ ಈಗಿನ ಸ್ಥಿತಿಯನ್ನು ಎಲ್ಲರಿಗೂ ತೋರಿಸಲು ನಾನು ಈ ಫೋಟೋಶೂಟ್ ಮಾಡಿದೆ. ಅದನ್ನು ತಪ್ಪು ಅರ್ಥದಲ್ಲಿ ತೆಗೆದುಕೊಳ್ಳಬೇಡಿ” ಎಂದು ಬರೆದುಕೊಂಡಿದ್ದಾರೆ.