ಉಡುಪಿ: ಒಬ್ಬರಿಗೆ ಸಹಾಯ ಮಾಡಬೇಕು ಅನ್ಸಿದ್ರೆ ಅದಕ್ಕೆ ಸಾವಿರ ದಾರಿಗಳು ಇರುತ್ತವೆ. ಇದಕ್ಕೆ ಸಾಕ್ಷಿ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಎಂಐಟಿ ವಿದ್ಯಾರ್ಥಿಗಳು.
Advertisement
ಹೌದು. ಅನಾಥ ಮಕ್ಕಳಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಎಂಐಟಿ ವಿದ್ಯಾರ್ಥಿಗಳು ಕೈಟ್ ಫೆಸ್ಟ್- ಝುಂಬಾ ಡಾನ್ಸ್ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ.
Advertisement
Advertisement
ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಎಂಟ್ರಿ ಫೀಸ್ ಇಟ್ಟಿದ್ದರು. ಒಂದು ಉತ್ತಮ ಉದ್ದೇಶಕ್ಕೆ ನಡೆದ ಫೆಸ್ಟ್ ವಿದ್ ಡಾನ್ಸ್ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಸಾವಿರಾರು ಮಂದಿ ಪಾಲ್ಗೊಂಡರು. ವಿದ್ಯಾರ್ಥಿಗಳು ಮೈದಾನದಲ್ಲಿ ಗಾಳಿಪಟ ಹಾರಿಸಿ, ಝುಂಬಾ ಡಾನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಆದ್ರೆ ಸಿಕ್ಕಾಪಟ್ಟೆ ಗಾಳಿಯ ಹೊಡೆತ ಇದ್ದುದರಿಂದ ಗಾಳಿಪಟ ಹಾರಿಸಲು ಕಷ್ಟವಾದ್ರೂ, ಛಲ ಬಿಡದೆ ವಿದ್ಯಾರ್ಥಿಗಳು ಮತ್ತೆ ಮತ್ತೆ ಗಾಳಿಪಟ ಹಾರಿಸ್ತಾಯಿದ್ರು.
Advertisement
ಈ ಕಾರ್ಯಕ್ರಮದಲ್ಲಿ ಒಟ್ಟುಗೂಡಿಸಿದ ಹಣವನ್ನು ಕುಕ್ಕಿಕಟ್ಟೆಯಲ್ಲಿರುವ ಅನಾಥ ಮಕ್ಕಳ ಶಾಲೆಗೆ ದಾನ ಮಾಡಿದ್ದಾರೆ. ಮೂರು ಗಂಟೆಗಳ ಕಾರ್ಯಕ್ರಮದಲ್ಲಿ ಎರಡೂವರೆ ಲಕ್ಷ ರೂ. ಒಟ್ಟಾಗಿದೆ. ಮಣಿಪಾಲ ವಿವಿಯ ಮೈದಾನದಲ್ಲಿ ಪ್ರವೇಶದ ಸಂದರ್ಭ ಗಾಳಿಪಟಗಳನ್ನು ಕೊಡಲಾಗುತ್ತಿತ್ತು. ಗಾಳಿಪಟದ ಜೊತೆ ಝುಂಬಾ ಡಾನ್ಸ್ ಪಾಸ್, ತಂಪು ಪಾನೀಯ, ಐಸ್ ಕ್ರೀಂ ವ್ಯವಸ್ಥೆ ಮಾಡಲಾಗಿತ್ತು.
ಝುಂಬಾ ಡಾನ್ಸ್ ನಡೆಸಿಕೊಟ್ಟ ಇಬ್ಬರು ನರ್ತಕಿಯರು ಇಡೀ ಗುಂಪನ್ನೇ ಕುಣಿಸಿದ್ರು. ಖರ್ಚೆಲ್ಲಾ ಕಳೆದು ಎರಡೂವರೆ ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಕಾಲೇಜು ಮುಗಿಯುವ ವೇಳೆಗೆ ವಿದ್ಯಾರ್ಥಿಗಳು ತಮ್ಮ ಪಾಕೆಟ್ ಮನಿ ಹಾಕಿ ಅನಾಥ ಮಕ್ಕಳಿಗೆ ನೀಡುವುದಾಗಿ ಹೇಳಿದ್ದಾರೆ.
ನಾವು ಫ್ರೆಂಡ್ಸೆಲ್ಲಾ ಒಟ್ಟಾಗಿ ಕೈಟ್ ಫೆಸ್ಟ್-ಝುಂಬಾ ಡಾನ್ಸಲ್ಲಿ ಪಾಲ್ಗೊಂಡಿದ್ದೇವೆ. ಸಮುದ್ರ ತೀರದಲ್ಲಿ ಗಾಳಿಪಟ ಹಾರಿಸಿ ಅನುಭವ ಇದೆ. ಆದ್ರೆ ಎಂಡ್ ಪಾಯಿಂಟ್‍ನಲ್ಲಿ ಸಿಕ್ಕಾಪಟ್ಟೆ ಗಾಳಿಯಿರೋದ್ರಿಂದ ಗಾಳಿಪಟ ಮೇಲೆ ಹಾರುವುದಿಲ್ಲ. ಆದ್ರೂ ಎಲ್ಲಾ ಸೇರ್ಕೊಂಡು ಎಂಜಾಯ್ ಮಾಡ್ತಿದ್ದೇವೆ ಅಂತಾರೆ ಸ್ವಾತಿ ಮತ್ತು ಶೈನಿ.
ವರ್ಷಪೂರ್ತಿ ಮಣಿಪಾಲದ ಎಂಐಟಿ ವಿದ್ಯಾರ್ಥಿಗಳು ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಾರೆ. ಪ್ರತೀ ಕಾರ್ಯಕ್ರಮದ ಮೂಲಕ ಸಹಾಯ ಮಾಡ್ತಿದ್ದಾರೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಲಿ ಅನ್ನೋದು ನಮ್ಮ ಹಾರೈಕೆ.