ಬ್ರೇಕಪ್ ಎಂದಿದ್ದಕ್ಕೆ ಪ್ರೇಯಸಿಯ ತುಟಿ ಕಚ್ಚಿ ಬಿಸಾಕಿದ ಪಾಗಲ್ ಪ್ರೇಮಿ

Public TV
2 Min Read
ex boyfriend collage

ವಾಷಿಂಗ್ಟನ್: ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಆತ ಆಕೆಯ ತುಟಿ ಕಚ್ಚಿ ಬಿಸಾಕಿದ ಪ್ರಕರಣವೊಂದು ಅಮೆರಿಕದ ದಕ್ಷಿಣ ಕೆರೋಲಿನಾದಲ್ಲಿ ನಡೆದಿದೆ.

ಕಾಯಲಾ ಒಂದು ವರ್ಷದ ಹಿಂದೆ ನಡೆದ ಘಟನೆಯನ್ನು ಈಗ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನೆಟ್ಟಿಗರು ಮಾಜಿ ಪ್ರಿಯಕರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಪ್ರಕರಣ ದಾಖಲಾಗಿ ಕೋರ್ಟ್ ಈಗ ಆರೋಪಿ ಹಾರೂನ್ ಫ್ಲೇರಿಗೆ 12 ವರ್ಷ ಜೈಲು ಶಿಕ್ಷೆ ನೀಡಿದೆ.

ex boyfriend 3

ಪೋಸ್ಟ್ ನಲ್ಲಿ ಏನಿದೆ?
2016ರಲ್ಲಿ ಶ್ರೀಮಂತ ವ್ಯಕ್ತಿಯ ಮಗ ಹಾರೂನ್ ಫ್ಲೇರಿ ಜೊತೆ ನಾನು ಡೇಟಿಂಗ್ ಮಾಡುತ್ತಿದ್ದೆ. ಆಗ ನನಗೆ ಕೇವಲ 17 ವರ್ಷವಾಗಿತ್ತು. 1 ವರ್ಷ ಲಿವಿಂಗ್ ರಿಲೇಷನ್ ಬಳಿಕ ನಮ್ಮ ನಡುವೆ ಭಿನ್ನಾಭಿಪ್ರಾಯ ಬಂತು.

ಫ್ಲೇರಿ ನನ್ನನ್ನು ಆತನ ಆಸ್ತಿಯಂತೆ ಉಪಯೋಗಿಸಿಕೊಳ್ಳುತ್ತಿದ್ದ. ನನಗೆ ಇದು ತುಂಬಾ ಬೇಗ ಅನುಭವವಾಯಿತು. ಫ್ಲೇರಿ ಕೆಟ್ಟ ಉದ್ದೇಶದಿಂದ ನನ್ನ ಹತ್ತಿರ ಬರುತ್ತಿದ್ದನು. ಆತ ನನ್ನನ್ನು ಎಂದಿಗೂ ಪ್ರೀತಿಸಲಿಲ್ಲ. ನನ್ನನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದನು. ಆತ ಚಿಕ್ಕ- ಚಿಕ್ಕ ವಿಷಯಕ್ಕೂ ನನ್ನ ಮೇಲೆ ಕೋಪ ಮಾಡಿಕೊಂಡು ಜಗಳವಾಡುತ್ತಿದ್ದನು. ಹಾಗಾಗಿ ನಾನು ಆತನ ಜೊತೆ ಬ್ರೇಕಪ್ ಮಾಡಿಕೊಂಡೆ.

ex boyfriend 6

ಬ್ರೇಕಪ್ ಆಗಿ ಕೆಲವು ವಾರದ ನಂತರ ಫ್ಲೇರಿ ನನ್ನನ್ನು ಭೇಟಿಯಾಗಲು ಬಂದಿದ್ದ. ನಾನು ಆತನನ್ನು ಭೇಟಿಯಾಗಲು ನಿರಾಕರಿಸಿದೆ. ಆದರೆ ಅವನು ಕಾರಿನಲ್ಲಿ ಬಂದು ನನ್ನ ಮನೆಯ ಹೊರಗೆ ನನಗಾಗಿ ಕಾಯುತ್ತಿದ್ದ. ಆತನನ್ನು ನೋಡಿ ನನಗೆ ಸ್ವಲ್ಪ ಹೆದರಿಕೆ ಆಯಿತು. ಆ ದಿನ ಒಂದು ಕೈಯಲ್ಲಿ ಹೂಗುಚ್ಚ ಹಾಗೂ ಕಾರ್ಡ್ ಹಿಡಿದುಕೊಂಡು ನಿಂತಿದ್ದ ಫ್ಲೇರಿ ಕಾರ್ಡ್ ನಲ್ಲಿ ‘ವಾಪಸ್ ಬಾ’ ಎಂದು ಬರೆದು ನನ್ನ ಹತ್ತಿರ ಮನವಿ ಮಾಡಿಕೊಂಡಿದ್ದ.

ex boyfriend 7

ಆತನ ಮನವಿಯನ್ನು ತಿರಸ್ಕರಿಸಿ ಹೋದಾಗ ಆತ ನನ್ನನ್ನು ಜೋರಾಗಿ ಎಳೆದು ಆತನ ಹಲ್ಲಿನಿಂದ ನನ್ನ ತುಟಿಯನ್ನು ಕಚ್ಚಿದ. ಕಚ್ಚಿದ ತೀವ್ರತೆಗೆ ತುಟಿ ಹರಿದು ಕೆಳಗೆ ಬಿತ್ತು. ಇದನ್ನು ನೋಡಿ ಸಂತಸಗೊಂಡ ಆತ, ನಿನ್ನ ಮುಂದಿನ ಬಾಯ್‍ಫ್ರೆಂಡ್‍ಗಾಗಿ ಈ ಗುರುತನ್ನು ಮಾಡಿದ್ದೇನೆ ಎಂದು ಹೇಳಿ ಕೃತ್ಯದ ಬಗ್ಗೆ ಸಮರ್ಥನೆ ನೀಡಿದ. ನಾನು ನೋವಿನಲ್ಲಿ ಅಳುತ್ತಿದ್ದಾಗ ಆತ ಜೋರಾಗಿ ನಗುತ್ತಿದ್ದ. ಬಳಿಕ ಆತ ಅಲ್ಲಿಂದ ಹೊರಟು ಹೋದನು.

ex boyfriend 5

ನಾನು ನೋವಿನಲ್ಲೇ ಆಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಕೊಂಡೆ. ಈಗ ವೈದ್ಯರು 300 ಹೊಲಿಗೆ ಹಾಕಿ ತುಟಿಯನ್ನು ಸರಿ ಮಾಡಿದ್ದಾರೆ. ನನ್ನ ನೋವಿನ ಕಥೆ ಕೇಳಿದ ಆಸ್ಪತ್ರೆ ಸಿಬ್ಬಂದಿ ಬ್ಲೇಕ್ ನನಗೆ ಧೈರ್ಯ ತುಂಬಿದರು. ಅವರ ಉತ್ತಮ ಮನಸ್ಸಿಗೆ ನಾನು ಸೋತು ಈಗ ಅವರನ್ನೇ ಪ್ರೀತಿಸುತ್ತೇನೆ ಎಂದು ಕಾಯಲಾ ಎಫ್‍ಬಿಯಲ್ಲಿ ಹೇಳಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *