ಹಾಸನ: ಹಾಸ್ಟೆಲೊಂದರಲ್ಲಿ (Hostel) ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿರುವ ಪ್ರಕರಣದ ಹಿನ್ನೆಲೆ ಹಾಸ್ಟೆಲ್ ವಾರ್ಡನ್ (Hostel Warden) ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಲಾಗಿದೆ.ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಶತಕದ ಗಡಿ ದಾಟಿದ ಸರಾಸರಿ ಮಳೆ – ಕಳೆದ ಬಾರಿ ಎಷ್ಟಿತ್ತು? ಈ ಬಾರಿ ಎಷ್ಟಾಗಿದೆ?
ಹಾಸ್ಟೆಲೊಂದರಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿರುವ ಪ್ರಕರಣವೊಂದು ಇತ್ತೀಚಿಗೆ ಕೇಳಿ ಬಂದಿತ್ತು. ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಮಾನತು ಮಾಡುವಂತೆ ಶಿಫಾರಸ್ಸು ಮಾಡಿ ವರದಿ ನೀಡಿದ್ದರು.
ವರದಿ ಆಧರಿಸಿ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಾರ್ಡನ್ ಚಂದ್ರಶೇಖರ್ ಅವರನ್ನು ಅಮಾನತು ಮಾಡುವಂತೆ ಜಿ.ಪಂಚಾಯತ್ ಸಿಇಓ ಪೂರ್ಣಿಮಾ (CEO Poornima) ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾರ್ಡನ್ ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿದೆ.ಇದನ್ನೂ ಓದಿ: ನನ್ನ ಫ್ಯಾನ್ಸ್ ಯಾವತ್ತೂ ಕಳಂಕ ತರುವ ಕೆಲಸ ಮಾಡಲ್ಲ: ಅಭಿಮಾನಿಗಳ ಬಗ್ಗೆ ಕಿಚ್ಚನ ಅಕ್ಕರೆಯ ಮಾತು