ಒಬ್ಬರ ಕೈ ಒಬ್ಬರು ಹಿಡ್ಕೊಂಡು ಹಳ್ಳ ದಾಟಿದ ವಿದ್ಯಾರ್ಥಿಗಳು

Public TV
1 Min Read
dwd flood student collage copy

ಧಾರವಾಡ: ಒಬ್ಬರ ಕೈ ಒಬ್ಬರು ಹಿಡಿದುಕೊಂಡು ವಿದ್ಯಾರ್ಥಿಗಳು ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಿದ್ದಾರೆ.

ಧಾರವಾಡ ಜಿಲ್ಲೆ ವೀರಾಪುರ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ನಿತ್ಯ ಈ ಭಯಂಕರ ಹಳ್ಳವನ್ನು ದಾಟಬೇಕಿದೆ. ಈ ಹಳ್ಳ ದಾಟಲು ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ. ಹಾಗಾಗಿ ಅವರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಪ್ರಾಣ ಪಣಕ್ಕಿಟ್ಟು ಶಾಲೆಗೆ ಹೋಗಿ ಬರುತ್ತಿದ್ದಾರೆ.

dwd flood student e1572066473631

ಎರಡು ತಿಂಗಳ ಹಿಂದಷ್ಟೇ ಈ ಹಳ್ಳ ದಾಟಲು ಹೋಗಿದ್ದ ರೈತರೊಬ್ಬರು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಈಗ ಅದೇ ಹಳ್ಳ ದಾಟಲು ಹೈಸ್ಕೂಲ್ ವಿದ್ಯಾರ್ಥಿಗಳು ನಿತ್ಯ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದಾರೆ.

ಸುಮಾರು 300 ವಿದ್ಯಾರ್ಥಿಗಳು ಈ ಹಳ್ಳ ದಾಟಿಯೇ ಶಾಲೆಗೆ ಹೋಗಿ ಬರಬೇಕು. ಮಳೆ ಮುಂದುವರಿದ ಹಿನ್ನೆಲೆ ಹಳ್ಳ ಮತ್ತೆ ತುಂಬಿ ಹರಿಯುತ್ತಿದೆ. ಅಲ್ಲದೆ ಹಳ್ಳ ತುಂಬಿ ಸೇತುವೆ ಮೇಲೆಯೇ ನೀರು ಹರಿಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *