ಬೆಂಗಳೂರು: ಸಂಪೂರ್ಣ ಮದ್ಯ ನಿಷೇಧಕ್ಕಾಗಿ ಮಹಿಳೆಯರು 12 ದಿನಗಳ ಕಾಲ ಸುಮಾರು 210 ಕಿ.ಮೀ ಪಾದಯಾತ್ರೆ ಮಾಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಫ್ರೀಡಂ ಪಾರ್ಕ್ ಬಳಿ ಪೊಲೀಸರು ಜಾಥಾವನ್ನು ತಡೆದಿದ್ದಾರೆ.
ಸಾವಿರಾರು ಮಹಿಳೆಯರು ರಸ್ತೆ ಮಧ್ಯಯೇ ಕೂತು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಿಂದ ಪೊಲೀಸರು ಪ್ರೀಡಂ ಪಾರ್ಕ್‍ನ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ವಾಹನಗಳೇ ಇಲ್ಲದೆ ಈ ರಸ್ತೆ ಖಾಲಿ ಖಾಲಿಯಾಗಿತ್ತು. ಆದರೆ ಬುಧವಾರ ಕಾಲೇಜು ಯುವತಿಯರು ಮಾತ್ರ ಮದ್ಯ ನಿಷೇಧವಾದ್ರೇನು? ಆಗದಿದ್ರೇನು ಎಂದು ಬಂದ್ ಆಗಿರುವ ರಸ್ತೆಯಲ್ಲಿ ಕುಳಿತು ಮೊಬೈಲ್‍ಗೆ ಪೋಸ್ ಕೊಡುತ್ತಿದ್ದರು. ಜೊತೆಗೆ ಖಾಲಿ ರೋಡಿನಲ್ಲಿ ಸೆಲ್ಫಿ ತಗೆದುಕೊಳ್ಳುವುದರಲ್ಲಿ ಮಹಾರಾಣಿಯರು ಫುಲ್ ಬ್ಯುಸಿಯಾಗಿದ್ದರು.
Advertisement
Advertisement
ಒಂದೇ ರಸ್ತೆ ಎರಡು ವಿಭಿನ್ನ ಚಿತ್ರಗಳು ಹಿರಿಯ ಮಹಿಳೆಯರು ಮದ್ಯ ನಿಷೇಧವಾದರೆ ಮನೆ-ಮಠ ಉಳಿಯುತ್ತೆ ಎಂದು ರಸ್ತೆಯಲ್ಲಿ ಧರಣಿ ಕುಳಿತಿದ್ರೆ, ಇತ್ತ ಕಾಲೇಜಿನ ಯುವತಿಯರು ತಮ್ಮ ಮೊಬೈಲಿನಲ್ಲಿ ಸೆಲ್ಫಿ ತಗೊಂಡು ಎಂಜಾಯ್ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv