ಬೆಂಗಳೂರು: ಇಂದು ಮುಂಜಾನೆಯಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದರೂ, ಖಾಸಗಿ ಶಾಲೆಗಳ ವಿದ್ಯಾರ್ಥಿನಿಯರ ಗ್ಯಾಂಗ್ವಾರ್ ಬಿಸಿ ಬಿಸಿ ಸುದ್ದಿಯಾಗಿತ್ತು. ಈಗ ಈ ಸುದ್ದಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಎರಡು ಖಾಸಗಿ ಶಾಲೆಗಳ ವಿದ್ಯಾರ್ಥಿನಿಯರ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಅಪ್ಡೇಟ್ ಸಿಕ್ಕಿದೆ. ಈ ಗ್ಯಾಂಗ್ವಾರ್ ಹಿಂದೆ ಇದೆ ಒಂದು ಡೇಟಿಂಗ್ ಕಥೆ ಇದೆ ಎಂಬ ಮಾಹಿತಿ ಸಿಕ್ಕಿದೆ. ಒಂದು ಜೋಡಿಯ ಮಧ್ಯೆ ಮತ್ತೊಂದು ಯುವತಿ ಮಧ್ಯ ಪ್ರವೇಶ ಮಾಡಿದ್ದಾಳೆ. ಇದನ್ನೂ ಓದಿ: ಇನ್ಸ್ಟಾದಲ್ಲಿ ಆರಂಭ ಬೀದಿಯಲ್ಲಿ ಮಾರಾಮಾರಿ – ರಸ್ತೆಯಲ್ಲೇ ವಿದ್ಯಾರ್ಥಿನಿಯರ ಗ್ಯಾಂಗ್ವಾರ್
Advertisement
Advertisement
ಗರ್ಲ್ ಫ್ರೆಂಡ್ ಬಿಟ್ಟು ಬೇರೆ ಯುವತಿ ಜೊತೆ ಯುವಕ ಡೇಟಿಂಗ್ ಹೋಗಿದ್ದ. ಇದೇ ವಿಚಾರಕ್ಕೆ ವಿದ್ಯಾರ್ಥಿನಿಯರ ಗುಂಪು ಶಾಲೆಯ ಬಳಿ ಸೇರಿದೆ. ಆದ್ರೆ ಲವ್ ಹಾಗೂ ಡೇಟಿಂಗ್ ವಿಚಾರವನ್ನು ಮಾತ್ರ ವಿದ್ಯಾರ್ಥಿನಿಯರು ಬಾಯಿ ಬಿಡುತ್ತಿಲ್ಲ. ವಿದ್ಯಾರ್ಥಿನಿಯರ ಕೇವಲ ಸೋಶಿಯಲ್ ಮೀಡಿಯಾ ಚಾಟ್ ವಿಚಾರ ಅಂತ ಹೇಳುತ್ತಿದ್ದಾರೆ. ಆದರೆ ಡೇಟಿಂಗ್ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.
Advertisement
Advertisement
ಈ ವಿದ್ಯಾರ್ಥಿನಿಯರ ಗ್ಯಾಂಗ್ವಾರ್ ಹಿಂದೆ ಹಲವು ಊಹಾಪೋಹಗಳು ಹರಿದಾಡುತ್ತಿದೆ. ಆದರೆ ಇದು ನಿಜನಾ ಎಂಬುದನ್ನು ಜಗಳ ಮಾಡಿದ ವಿದ್ಯಾರ್ಥಿನಿಯರೇ ಖಚಿತ ಪಡಿಸಬೇಕಿದೆ. ಇದನ್ನೂ ಓದಿ: ಕುಡಿದು ಡ್ಯಾನ್ಸ್ ಮಾಡುತ್ತ ಮೈಮರೆತ ವರ – ಬೇರೆಯವರನ್ನ ಮದುವೆಯಾದ ವಧು