Bengaluru CityDistrictsKarnatakaLatestLeading NewsMain Post

ಇನ್‍ಸ್ಟಾದಲ್ಲಿ ಆರಂಭ, ಬೀದಿಯಲ್ಲಿ ಮಾರಾಮಾರಿ – ರಸ್ತೆಯಲ್ಲೇ ವಿದ್ಯಾರ್ಥಿನಿಯರ ಗ್ಯಾಂಗ್‍ವಾರ್

Advertisements

ಬೆಂಗಳೂರು: ನಗರದ ಎರಡು ಪ್ರತಿಷ್ಠಿತ ಖಾಸಗಿ ಶಾಲೆ ವಿದ್ಯಾರ್ಥಿನಿಯರ ಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಬೀದಿಯಲ್ಲಿ ಬಡಿದಾಡಿಕೊಂಡ ವೀಡಿಯೋ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಾರಂಭವಾಗಿದ್ದು ಹೇಗೆ?
ಇನ್‍ಸ್ಟಾಗ್ರಾಮ್ ಮೆಸೇಜ್‍ನಲ್ಲಿ ಯುವಕನೊಬ್ಬನ ತಂದೆ ವಿಚಾರವಾಗಿ ಗಲಾಟೆ ಪ್ರಾರಂಭವಾಗಿದೆ. ಇವನ ಬೆಂಬಲಕ್ಕೆ ವಿದ್ಯಾರ್ಥಿನಿಯರು ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ನಡುವೆ ‘ನಮ್ಮ ಸ್ಕೂಲ್ ಟಾಪ್ ಸ್ಕೂಲ್’ ಎಂದು ಅವಾಜ್ ಹಾಕುತ್ತ ಕೆಟ್ಟ ಕೆಟ್ಟ ಪದಗಳನ್ನು ಬಳಸಿದ್ದಾರೆ. ಅಷ್ಟಕ್ಕೆ ಮುಗಿಯದೆ ವಿದ್ಯಾರ್ಥಿನಿಯರು, ಮನೆಯ ಬಳಿ ಬಂದು ಗಲಾಟೆ ಮಾಡ್ತೀನಿ, ಹೊಡಿತೀನಿ ಎಂದು ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಕುಡಿದು ಡ್ಯಾನ್ಸ್ ಮಾಡುತ್ತ ಮೈಮರೆತ ವರ – ಬೇರೆಯವರನ್ನ ಮದುವೆಯಾದ ವಧು

ಕೊನೆಗೂ ನಗರದ ಸೆಂಟ್ ಮಾರ್ಕ್ಸ್ ನಡು ರಸ್ತೆಯಲ್ಲೇ 20 ವಿದ್ಯಾರ್ಥಿನಿಯರು ಈ ಕುರಿತು ಮಾತನಾಡಲು ಪ್ರಾರಂಭ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ‘ನಮ್ಮ ಸ್ಕೂಲ್ ಅಂದ್ರೆ ಗೊತ್ತಾ? ನಮ್ಮ ಸ್ಕೂಲ್ ಟಾಪ್ ಸ್ಕೂಲ್’ ಎಂದು ಹಾಕಿಸ್ಪಿಕ್ ಹಿಡಿದು ಬಡಿದಾಡಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ವೈರಲ್ ಆಗಿದೆ.

ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ. ಆದರೆ ವಿದ್ಯಾರ್ಥಿನಿಯ ಪೋಷಕರೊಬ್ಬರು ಈ ಕುರಿತು ದೂರು ನೀಡಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಬೇಸಿಗೆಯ ಮಳೆಗೆ ಮುಳುಗಿದ ಬೆಂಗಳೂರು – ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? 

ಈ ಹಿನ್ನೆಲೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿದ್ಯಾರ್ಥಿನಿಯ ತಾಯಿ, ಹಲ್ಲೆ ಮಾಡಿದ ವಿದ್ಯಾರ್ಥಿನಿಯರಿಗೆ ಶಿಕ್ಷೆ ಆಗಬೇಕು. ನಕಲಿ ಪೋಸ್ಟ್ ಹಾಕಿ ವಿವಾದ ಪ್ರಾರಂಭವಾಗಿದೆ. ಈ ಕುರಿತು ಮಾತುಕತೆ ನಡೆಸಲು ವಿದ್ಯಾರ್ಥಿನಿಯರು ಸ್ಕೂಲ್ ಬಳಿ ಕರೆಸಿದ್ದಾರೆ. ಈ ವೇಳೆ ಇದ್ದಕ್ಕಿಂತೆ ಗಲಾಟೆ ಶುರುವಾಗಿದೆ. ನನ್ನ ಮಗಳಿಗೆ ಮೂಗಿನಲ್ಲಿ ರಕ್ತ ಬರುವ ರೀತಿ ಹಲ್ಲೆ ಮಾಡಿದ್ದಾರೆ. ಈಗ ಪೋಲೀಸ್ ದೂರು ನೀಡ್ತೇವೆ ಎಂದು ಹೇಳಿದ್ದಾರೆ.

Leave a Reply

Your email address will not be published.

Back to top button