ವಾಷಿಂಗ್ಟನ್: ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮೆರಿಕದಲ್ಲಿ ಒಂದು ಕಟ್ಟಡದ ಛಾವಣಿಯಿಂದ ಮತ್ತೊಂದು ಕಟ್ಟಡದ ಛಾವಣಿ ಹಾರಲು ಹೋಗಿ ಮೃತಪಟ್ಟದ್ದಾನೆ.
ವಿವೇಕ್ ಸುಬ್ರಮಣಿ(23) ಮೃತಪಟ್ಟ ವಿದ್ಯಾರ್ಥಿ. ಡ್ರೆಕ್ಸೆಲ್ ಮೆಡಿಕಲ್ ಕಾಲೇಜಿನಲ್ಲಿ ವಿವೇಕ್ ಮೂರನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದನು. ಫಿಲಡೆಲ್ಫಿಯಾದಲ್ಲಿ ವಿವೇಕ್ ಒಂದು ಕಟ್ಟಡದ ಛಾವಣಿಯಿಂದ ಮತ್ತೊಂದು ಕಟ್ಟಡ ಛಾವಣಿಗೆ ಜಿಗಿಯಲು ಹೋಗಿ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಜನವರಿ 11ರ ರಾತ್ರಿ ಸುಬ್ರಮಣಿ ಹಾಗೂ ಆತನ ಇಬ್ಬರು ಸ್ನೇಹಿತರು ತಾವು ವಾಸವಿದ್ದ ಅಪಾರ್ಟ್ ಮೆಂಟ್‍ನ ಛಾವಣಿಯಿಂದ ಜಿಗಿಯುವಾಗ ಈ ಘಟನೆ ನಡೆದಿದೆ. ಘಟನೆ ವೇಳೆ ಸಂಜೆ ಮೂವರು ಪಾರ್ಟಿಯಲ್ಲಿ ಭಾಗವಹಿಸಿದ್ದು, ಅಲ್ಲಿ ಮದ್ಯ ಸೇವಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ ಅಂತಾ ಪೊಲೀಸರು ಹೇಳಿದ್ದಾರೆ.
ರಕ್ತದ ಮಡುವಿನಲ್ಲಿ ಸುಬ್ರಮಣಿ ಕೆಳಗೆ ಬಿದ್ದಿರುವುದನ್ನು ಆತನ ಸ್ನೇಹಿತ ಗಮನಿಸಿದ್ದಾನೆ. ಬಳಿಕ ಸುಬ್ರಮಣಿಯನ್ನು ವಿಚಾರಿಸಲು ಹೋದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತಕ್ಷಣ ಆತನನ್ನು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.