ಲಕ್ನೋ: ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್‍ಯೂ) ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದಿದ್ದಕ್ಕೆ ಹೋಟೆಲ್ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಶ್ವೇತಾ ಸಿಂಗ್ (22) ಕೊಲೆಯಾದ ವಿದ್ಯಾರ್ಥಿನಿ. ಶ್ವೇತಾ ಸಿಂಗ್ ಬಿಎಚ್‍ಯೂ ವಿದ್ಯಾರ್ಥಿನಿಯಾಗಿದ್ದು, ವಾರಣಾಸಿಯ ಅಶೋಕ ಹೋಟೆಲ್ ಮಾಲೀಕ, ಆರೋಪಿ ಅಮಿತ್ ಆಕೆಯ ಸ್ನೇಹಿತ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಶ್ವೇತಾ ಸಿಂಗ್ ಆರೋಪಿ ಅಮಿತ್‍ನನ್ನು ಭೇಟಿ ಮಾಡಲು ಆಗಾಗ ಹೋಟೆಲ್‍ಗೆ ಹೋಗುತ್ತಿದ್ದಳು. ಇಂದು ಬೆಳಗ್ಗೆ ಶ್ವೇತಾ ತನ್ನ ಗೆಳೆಯ ಅಮಿತ್‍ನನ್ನು ಭೇಟಿ ಮಾಡಲು ಹೋಟೆಲ್‍ಗೆ ಬಂದಿದ್ದಳು. ಈ ವೇಳೆ ಹೋಟೆಲಿನ ರೂಮಿನಲ್ಲಿ ಗುಂಡಿನ ಸದ್ದು ಕೇಳಿತ್ತು. ಆಗ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಶ್ವೇತಾ ಮೃತದೇಹ ಬೆಡ್ ಮೇಲೆ ಬಿದ್ದಿತ್ತು.
Advertisement
Advertisement
ಮೃತ ಶ್ವೇತಾಳ ತಂದೆ ಉತ್ತರಪ್ರದೇಶದಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ದಶಾಶ್ವಮೇಧ ಘಾಟ್‍ನಲ್ಲಿ ಸ್ನಾನಕ್ಕೆ ಎಂದು ತೆರಳಿದ್ದಾಗ ಅಲ್ಲಿ ಮುಳುಗಿ ಮೃತಪಟ್ಟಿದ್ದರು. ಅಲ್ಲದೆ ಶ್ವೇತಾ ತಾಯಿ ಕೂಡ ಮೃತಪಟ್ಟಿದ್ದಾರೆ. ಶ್ವೇತಾ ತನ್ನ ತಾತ ರಾಮ್ ಇಕ್ಬಾಲ್ ಸಿಂಗ್ ಜೊತೆ ವಾಸಿಸುತ್ತಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ಮಾಲೀಕ ಅಮಿತ್‍ನನ್ನು ಬಂಧಿಸಿದ್ದಾರೆ. ಬಳಿಕ ಶ್ವೇತಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡ ಕ್ಯಾಮೆರಾವನ್ನು ಪರಿಶೀಲಿಸಿದೆ.