– ಪ್ರಾಣಾಪಾಯದಿಂದ ಬೈಕ್ ಸವಾರ ಪಾರು
ಹೈದರಾಬಾದ್: ರಸ್ತೆ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.
ಶ್ರೀವಿದ್ಯಾ (21) ಮೃತ ವಿದ್ಯಾರ್ಥಿನಿ. ಮಲ್ಕಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ಸರ್ಕಲ್‍ನಲ್ಲಿ ಈ ಅಪಘಾತ ನಡೆದಿದೆ. ವಿದ್ಯಾರ್ಥಿನಿ ಆಂಧ್ರ ವೈದ್ಯಕೀಯ ಕಾಲೇಜಿನಲ್ಲಿ ತೃತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಳು.
ಸಂತೋಷ್ ಮತ್ತು ಶ್ರೀವಿದ್ಯಾ ದ್ವಿಚಕ್ರ ವಾಹನದಲ್ಲಿ ಕೆಜಿಹೆಚ್‍ನಿಂದ ಗಜುವಾಕಕ್ಕೆ ಹೋಗುತ್ತಿದ್ದರು. ಆದರೆ ಮಾರುತಿ ಸರ್ಕಲ್ ಬಳಿ ಬರುತ್ತಿದ್ದಂತೆ ಆಕಸ್ಮಿಕವಾಗಿ ವಾಹನದಿಂದ ಶ್ರೀವಿದ್ಯಾ ಕೆಳಗೆ ಬಿದ್ದಿದ್ದಾಳೆ. ಆದರೆ ಇದೇ ಸಮಯದಲ್ಲಿ ಶ್ರೀವಿದ್ಯಾ ತಲೆಯ ಮೇಲೆ ಟ್ರಕ್ ಹರಿದಿದೆ. ಪರಿಣಾಮ ಸ್ಥಳದಲ್ಲಿಯೇ ಶ್ರೀವಿದ್ಯಾ ಮೃತಪಟ್ಟಿದ್ದಾಳೆ. ಆದರೆ ಸಂತೋಷ್ ಅಪಾಯದಿಂದ ಪಾರಾಗಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.