ಬಿಸಿಲಿಗೆ ತಲೆ ಸುತ್ತಿ ಬಿದ್ದ ವಿದ್ಯಾರ್ಥಿಗಳು – ಹಾಡಿಗೆ ನೃತ್ಯ ಮಾಡಿದ ಅಧಿಕಾರಿಗಳು

Public TV
1 Min Read
STUDENT KOPPALA 1

ಕೊಪ್ಪಳ: ರಾಜ್ಯಾದ್ಯಂತ ನಡೆದ ಲಕ್ಷ ಕಂಠಗಳ ಗಾಯನ ಕಾರ್ಯಕ್ರಮ ಕೊಪ್ಪಳದಲ್ಲಿ ಅವ್ಯವಸ್ಥೆಯ ಆಗರವಾಗಿದ್ದು, ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಲೆ ಸುತ್ತಿ ಕೆಳಗೆ ಬಿದ್ದಿದ್ದಾರೆ.

STUDENT KOPPALA 3

ನಗರದ ಸಾರ್ವಜನಿಕ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಸಂಪೂರ್ಣವಾಗಿ ಹಳ್ಳಹಿಡಿದಿದೆ. ನಗರದ ವಿವಿಧ ಶಾಲೆಯ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಕ್ಷ ಕಂಠಗಳ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಸಿಲಿನ ತಾಪಮಾನ ಹೆಚ್ಚಾದ ಪರಿಣಾಮ ವಿದ್ಯಾರ್ಥಿಗಳು ತಲೆ ಸುತ್ತಿ ಬೀಳುವ ದೃಶ್ಯ ಸಾಮಾನ್ಯವಾಗಿತ್ತು. ಇದನ್ನೂ ಓದಿ: ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ ಮಾತಾಡ ‘ಕನ್ನಡ’ ಗೀತೆಗಳ ಕಲರವ

ಜೊತೆಗೆ ಮೂರು ಹಾಡುಗಳ ಪೈಕಿ ಎರಡು ಹಾಡುಗಳನ್ನು ಮಾತ್ರ ವಿದ್ಯಾರ್ಥಿಗಳಿಂದ ಹಾಡಿಸಲಾಯಿತು. ಆದರೆ ಹುಟ್ಟಿದರೆ ಕನ್ನಡ ನಾಡಿನಲ್ಲೇ ಹುಟ್ಟಬೇಕು ಹಾಡನ್ನು ಗಾಯಕರೇ ಹಾಡಿದರು. ಈ ವೇಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬದಲು ಕಾರ್ಯಕ್ರಮ ಬಿಟ್ಟು ಹೊರಗಡೆ ಹೋಗುತ್ತಿದ್ದರು.

STUDENT KOPPALA 2

ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ನಿಲ್ಲದೆ ನೆರಳಿನಲ್ಲಿ ನಿಂತಿದ್ದರು. ಜಿಲ್ಲಾ ಆಡಳಿತ ವಿದ್ಯಾರ್ಥಿಗಳಿಗೆ ಕನಿಷ್ಠ ಕುಡಿಯುವ ನೀರು ಸಹ ಒದಗಿಸಿರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪಡಬಾರದ ಕಷ್ಟಪಟ್ಟರು. ಗಂಗಾವತಿಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜ್, ನಗರಸಭೆ ಆಯುಕ್ತ ಅರವಿಂದ್ ಜಮಖಂಡಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರರು ಕನ್ನಡ ಹಾಡುಗಳನ್ನು ಹಾಡುವ ಬದಲು ನೃತ್ಯ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಅಭಾಸ ಉಂಟು ಮಾಡಿದರು. ಇದನ್ನೂ ಓದಿ: ‘ಪುಷ್ಪ’ ಸಾಂಗ್ ನಲ್ಲಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ ರಶ್ಮಿಕಾ

Share This Article
Leave a Comment

Leave a Reply

Your email address will not be published. Required fields are marked *