LatestCinemaMain PostNationalSandalwoodSouth cinema

‘ಪುಷ್ಪ’ ಸಾಂಗ್ ನಲ್ಲಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ ರಶ್ಮಿಕಾ

ಹೈದರಾಬಾದ್: ‘ಪುಷ್ಪ’ ಸಿನಿಮಾದ ಸಾಂಗ್ ನಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ್ದಾರೆ.

'ಪುಷ್ಪ' ಸಾಂಗ್ ನಲ್ಲಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ ರಶ್ಮಿಕಾ

ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆಯುತ್ತಿರುವ ರಶ್ಮಿಕಾ ಯಾವುದಾದರು ವಿಷಯಕ್ಕೆ ಸುದ್ದಿಯಾಗುತ್ತಿರುತ್ತಾರೆ. ಅದೇ ರೀತಿ ಈ ಬಾರಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ ‘ಪುಷ್ಪ’ 3ನೇ ಸಾಂಗ್ ರಿಲೀಸ್ ಆಗಿದ್ದು, ಆ ಸಾಂಗ್ ನಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಸಾಂಗ್ ನಲ್ಲಿ ರಶ್ಮಿಕಾ ಪಕ್ಕ ಹಳ್ಳಿ ಹುಡುಗಿ ಲುಕ್ ನಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾರನ್ನು ಈ ಸಾಂಗ್ ನಲ್ಲಿ ಸಖತ್ ಹಾಟ್ ಆಗಿ ತೋರಿಸಲಾಗಿದೆ. ಸಾಮಿ ಸಾಮಿ ಸಾಂಗ್ ಅನ್ನು ಮೌನಿಕಾ ಯಾದವ್ ಹಾಡಿದ್ದು, ಅಲ್ಲು ಮತ್ತೆ ರಶ್ಮಿಕಾ ಅವರ ಡ್ಯಾನ್ಸ್ ಒಬ್ಬರನ್ನೊಬ್ಬರು ಮೀರಿಸುವಂತಿದೆ. ಅದು ಅಲ್ಲದೇ ಇಬ್ಬರ ಎಕ್ಸ್‍ಪ್ರೆಶನ್ ಮತ್ತು ಕಾಂಬಿನೇಷನ್ ಸಾಂಗ್ ನಲ್ಲಿ ಸಖತ್ ಆಗಿ ವರ್ಕ್ ಆಗಿದೆ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

'ಪುಷ್ಪ' ಸಾಂಗ್ ನಲ್ಲಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ ರಶ್ಮಿಕಾ

ದಾವಣಿ ಇಲ್ಲದೇ ಲೆಹಂಗಾ ತೊಟ್ಟ ರಶ್ಮಿಕಾ, ಕೊಳದಲ್ಲಿ ಸ್ನಾನ ಮಾಡುತ್ತಿರುವಾಗ ನೀಡೋ ಖಡಕ್ ಲುಕ್ ನೋಡುಗಾರಿಗೆ ವಾವ್ಹ್ ಎನ್ನಿಸುತ್ತೆ. ಗ್ರೂಪ್ ಡ್ಯಾನ್ಸ್ ನಲ್ಲಿ ಅವರ ಶೃಂಗಾರ ನಡೆ, ಹೀರೋ ಕಡೆ ನೋಡುವ ದೃಶ್ಯ ಎಲ್ಲವೂ ವೀಕ್ಷಕರನ್ನು ಆಕರ್ಷಿಸುತ್ತೆ.

ಈ ಸಾಂಗ್ ಬಿಡುಗಡೆಯಾದ ಗಂಟೆಯಲ್ಲೇ 16 ಲಕ್ಷ ಜನರು ನೋಡಿದ್ದಾರೆ. ಈ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಸಾಮಿ ಸಾಮಿ ಸಾಂಗ್ ಅನ್ನು ಚಂದ್ರಬೋಸ್ ಬರೆದಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್

ಅಲ್ಲು ಅರ್ಜುನ್, ಫಹದ್ ಫಾಸಿಲ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು 17 ಡಿಸೆಂಬರ್ 2021ರಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *