ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ನೋಡಲು ಬೆಂಗಳೂರಿನಿಂದ ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬಳು (Student) ಅಪಘಾತಕ್ಕೆ (Accident) ಬಲಿಯಾಗಿರುವ ರ್ದುಘಟನೆ ಚಿಕ್ಕಬಳ್ಳಾಪುರ (Chikkaballapura) ನಗರದ ವಾಪಸಂದ್ರ ಸೇತುವೆಯ ಕೆಳ ಭಾಗದಲ್ಲಿ ನಡೆದಿದೆ.
Advertisement
ಬೆಂಗಳೂರಿನ ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನ (Seshadripuram College) ಪ್ರಥಮ ವರ್ಷದ ಬಿಕಾಂ (B’com Student) ವಿದ್ಯಾರ್ಥಿನಿ ಚೈತ್ರಾ (18) (Chitra) ಮೃತ ದುರ್ದೈವಿ. ಅಂದಹಾಗೆ ಎಂಇಎಸ್ ಕಾಲೇಜಿನ(MES Collage) ತನ್ನ ಸ್ನೇಹಿತ ಲಿಖಿತ್ ಗೌಡನೊಂದಿಗೆ ಹೊಂಡಾ ಆಕ್ಸೆಸ್ ಗಾಡಿಯೊಂದಿಗೆ ಆಗಮಿಸಿದ್ದ ಚೈತ್ರಾ, ಶ್ರೀನಿವಾಸ ಸಾಗರ ಜಲಾಶಯ (Srinivasa Sagara Dam) ನೋಡಿಕೊಂಡು ಬೆಂಗಳೂರಿನತ್ತ ವಾಪಾಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ತಿಂಗಳಾದ್ರೂ ಶಾಲಾ ಆವರಣದ ನೀರು ಹೊರಹಾಕದೇ ನಿರ್ಲಕ್ಷ್ಯ- ಇದು ಹೆಚ್‍ಡಿಕೆ ಸ್ವಕ್ಷೇತ್ರದ ದುಸ್ಥಿತಿ
Advertisement
Advertisement
Advertisement
ಚಿಕ್ಕಬಳ್ಳಾಪುರ ನಗರದ ಮೂಲಕ ವಾಪಸಂದ್ರದ ಸೇತುವೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ (National Highway) ಕಡೆ ಬರುವಾಗ ಬಾಗೇಪಲ್ಲಿ (Bagepalli) ಕಡೆಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ (Tipper Lorry) ಆಕ್ಸೆಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಕ್ಸೆಸ್ ಚಾಲನೆ ಮಾಡುತ್ತಿದ್ದ ಲಿಖಿತ್ ಗೌಡನ ಕಾಲಿಗೆ ಗಾಯವಾಗಿ ಕೆಳಗೆ ಬಿದ್ದಿದ್ದಾನೆ. ಮತ್ತೊಂದೆಡೆ ರಸ್ತೆಯಲ್ಲಿ ಬಿದ್ದ ಚೈತ್ರಾ ಮೇಲೆ ಟಿಪ್ಪರ್ ಲಾರಿ ಹರಿದಿದೆ. ಟಿಪ್ಪರ್ ಹರಿದ ಪರಿಣಾಮ ಚೈತ್ರಾ ದೇಹ ನಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕಾಲಿಗೆ ಗಾಯವಾಗಿರುವ ಕಾರಣ ಲಿಖಿತ್ ಗೌಡನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚೈತ್ರಾ ಬೆಂಗಳೂರಿನ ಕೆ.ಆರ್. ಪುರಂ (K.R. Puram) ನಿವಾಸಿ ಅಂತ ತಿಳಿದುಬಂದಿದ್ದು, ಲಿಖಿತ್ ಗೌಡ ಮಲ್ಲೇಶ್ವರಂನ(Malleshwaram) ಎಂಇಎಸ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪ್ಯಾಲೇಸ್ ಗುಟ್ಟಹಳ್ಳಿಯ ನಿವಾಸಿಯಾಗಿದ್ದಾನೆ. ಘಟನೆ ನಂತರ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್