ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯಿಂದ ಪುಟ್ಟ ರಾಷ್ಟ್ರ ಉಕ್ರೇನ್ ಕಂಗೆಟ್ಟಿದ್ದು, ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ತೆರಳಿದ ವಿದ್ಯಾರ್ಥಿಗಳು ಜೀವ ಭಯದಲ್ಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ತಾಯ್ನಾಡಿಗೆ ಕರೆದುಕೊಂಡು ಬರುವಲ್ಲಿ ಸತತ ಪ್ರಯತ್ನ ನqಯುತ್ತಿದ್ದು, ಈಗಾಗಲೇ ಹಲವಾರು ಮಂದಿ ವಾಪಸ್ಸಾಗಿದ್ದು, ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ವಿದ್ಯಾರ್ಥಿನಿಯೊಬ್ಬಳು ತಮ್ಮ ದೇಶದ ಧ್ವಜ ಇರುವ ಬಸ್ ಕಂಡಾಗ ಆದ ಸಂತಸವನ್ನು ಶೇರ್ ಮಾಡಿಕೊಂಡಿದ್ದಾಳೆ.
Advertisement
ಹೌದು. ಉಕ್ರೇನ್ ನಿಂದ ವಾಪಾಸ್ ಆದ ವಿದ್ಯಾರ್ಥಿನಿ ದೀಪಿಕಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಮ್ಮ ಹತ್ತಿರದ ಸಿಟಿಗಳಲ್ಲಿ ಬಾಂಬ್ ಬ್ಲಾಸ್ಟ್ ಆಗ್ತಿದ್ರಿಂದ ಭಯ ಆಗಿತ್ತು. ನಿರಂತರವಾಗಿ ನಾವು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೆವು. ಯಾವಾಗ ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್ಸುಗಳನ್ನ ನೋಡಿದ್ವೋ ಮತ್ತೆ ಬದುಕಿದಂತಾಯ್ತು. ನಮ್ಮ ದೇಶಕ್ಕೆ ಬಂದ ಕೂಡಲೇ ನಮ್ಮ ತಾಯಿಯನ್ನ ನೋಡಿದಂತಾಯ್ತು ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಒಂದು ಯುದ್ಧದಿಂದ ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದ್ರೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ: ಅಫ್ಘಾನ್ ನಿವಾಸಿ
Advertisement
Advertisement
ಅಲ್ಲಿದ್ದಾಗ ತುಂಬಾ ಭಯ ಆಗ್ತಿತ್ತು. ಏನ್ ಮಾಡೋದು ಗೊತ್ತಾಗ್ತಿರಲಿಲ್ಲ. ಅಲ್ಲಿನ ನಿವಾಸಿಗಳನ್ನ ಕೇಳಿದಾಗ ಏನೂ ಆಗಲ್ಲ ಅಂತ ಧೈರ್ಯ ಹೇಳುತ್ತಿದ್ದರು. ಯಾವಾಗ ಯುದ್ಧ ಆಗುತ್ತೆ ಅನ್ನೋದು ಪಕ್ಕಾ ಆಯ್ತೋ ಟಿಕೆಟ್ ಬುಕ್ ಮಾಡೋಕೆ ಹೊದೆವು. ಎಲ್ಲರೂ ಟಿಕೆಟ್ ಬುಕ್ ಮಾಡೋಕೆ ಶುರು ಮಾಡಿದ್ರಿಂದ ಟಿಕೆಟ್ ದರ ಸಹ ಸಿಕ್ಕಾಪಟ್ಟೆ ಜಾಸ್ತಿ ಆಯ್ತು. ಮತ್ತೆ ನಾವು ಬದುಕಿ ಬರ್ತೀವೋ, ಇಲ್ಲವೋ ಅನ್ನೋ ಭಯ ಶುರುವಾಗಿತ್ತು. 2014 ರಲ್ಲೂ ಇದೇ ದರ ಯುದ್ಧ ಭಯ ಇತ್ತಂತೆ. ಏನೂ ಆಗಲ್ಲ ಅಂತ ಅಲ್ಲಿನ ಜನ ನಮಗೆ ಧೈರ್ಯ ಹೇಳುತ್ತಿದ್ದರು ಎಂದು ತಮಗಾದ ಭೀಕರ ಅನುಭವವನ್ನು ದೀಪಿಕಾ ಬಿಚ್ಚಿಟ್ಟಳು. ಇದನ್ನೂ ಓದಿ: ಉಕ್ರೇನ್‍ಗೆ 65 ಕೋಟಿ ದೇಣಿಗೆ ನೀಡಿದ ಜಪಾನ್ ಉದ್ಯಮಿ
Advertisement
ಉಕ್ರೇನ್ ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇದೆ. ನಮ್ಮ ವಿದ್ಯಾಭ್ಯಾಸ ಮುಂದುವರಿಸಬೇಕು. ಅದಷ್ಟು ಬೇಗ ಎಲ್ಲ ಸರಿಹೋಗಬೇಕು. ಒಂದಿಬ್ಬರು ಮಾತ್ರ ಉಕ್ರೇನ್ ಗೆ ಹೋಗಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಉಕ್ರೇನ್ ಮೇಲಿದೆ. ಮತ್ತೆ ಎಲ್ಲ ಸರಿಹೋಗಿ ನಾವು ನಮ್ಮ ವಿದ್ಯಾಭ್ಯಾಸ ಮುಂದುವರಿಸುವುದಾಗಿ ಅವರು ತಿಳಿಸಿದಳು. ಇದನ್ನೂ ಓದಿ: ಮೋದಿ ಜೀ, ಯೋಗಿ ಜೀ ಯಾರಿದ್ದೀರಿ..? ಪ್ಲೀಸ್ ನಮ್ಮನ್ನು ಕಾಪಾಡಿ- ಯುಪಿ ವಿದ್ಯಾರ್ಥಿನಿ ಅಳಲು