CrimeLatestLeading NewsMain PostNational

ಫೋಟೋ ಕಳುಹಿಸುವಂತೆ ಪ್ರಿಯಕರನ ಕಾಟ – ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Advertisements

ಲಕ್ನೋ: ಪದೇ ಪದೇ ತನ್ನ ಫೋಟೋ ಕಳುಹಿಸುವಂತೆ ಒತ್ತಾಯಿಸುತ್ತಿದ್ದ ಪ್ರಿಯಕರನ ಕಾಟ ತಾಳಲಾರದೇ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಜ್ಜತ್ ನಜರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬರೇಲಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಬ್ಯಾಂಕ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಇದನ್ನೂ ಓದಿ: 1.30 ಲಕ್ಷಕ್ಕೆ ಮಾರಾಟವಾಗಿದ್ದ ಬಾಲಕ – ಚಿಕ್ಕಮ್ಮ ಅರೆಸ್ಟ್

ಏನಿದು ಪ್ರೇಮ್‌ ಕಹಾನಿ?
ಬರೇಲಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಬ್ಯಾಂಕ್ ಉದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಪ್ರತಿದಿನ ಇಬ್ಬರೂ ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಪ್ರೇಮಿಯು ವಾಟ್ಸಾಪ್‌ನಲ್ಲಿ ಹುಡುಗಿಯ ಫೋಟೋ ಕಳಿಸುವಂತೆ ಕೇಳಿದ್ದಾನೆ. ಪದೇ ಪದೇ ಒತ್ತಾಯಿಸಿದ್ದಾನೆ. ಆದರೂ ಆಕೆ ಫೋಟೋ ಕಳುಹಿಸಲು ನಿರಾಕರಿಸಿದ್ದಾಳೆ. ನಂತರ ವೀಡಿಯೋ ಕಾಲ್‌ನಲ್ಲಿ ಮಾತನಾಡುವುದಕ್ಕೂ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದಾನೆ. ಆಗ ಫೋನ್ ಕರೆ ಕಟ್ ಮಾಡಿದ್ದ ಗೆಳತಿ ಮತ್ತೆ ಅವನಿಗೆ ನಿರಂತರವಾಗಿ ಕರೆ ಮಾಡಿದ್ದಾಳೆ. ಸುಮಾರು 40 ಬಾರಿ ಕರೆ ಮಾಡಿದರೂ ಪ್ರೇಮಿ ತೆಗೆಯದಿದ್ದರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತನ್ನ ಪ್ರೇಮಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಭಾವಿಸಿ ತಾನೂ ವಿಷ ಸೇವಿಸಿದ್ದಾಳೆ. ಕೆಲ ಸಮಯ ಕಳೆದ ಬಳಿಕ ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಇನ್ಸ್‌ಪೆಕ್ಟರ್

ಇದೇ ವೇಳೆಗೆ `ನಿನಗೇನಾದರೂ ಆಯಿತೆಂದರೆ ನಿನ್ನ ಕುಟುಂಬದವರನ್ನು ಸಾಯಿಸುತ್ತೇನೆ’ ಎಂದು ಯುವಕ ಸಂದೇಶ ಕಳುಹಿಸಿದ್ದಾನೆ. ಈ ಸಂಬಂಧ ಕುಟುಂಬಸ್ಥರು ಬ್ಯಾಂಕ್ ಉದ್ಯೋಗಿ ಸಂಚಿತ್ ಅರೋರಾ ಅವರ ಪ್ರಚೋದನೆಯೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಇಜ್ಜತ್ ನಜರ್ ಪೊಲೀಸರು ಆರೋಪಿ ಸಂಚಿತ್ ಅರೋರಾ ಅವರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

Live Tv

Leave a Reply

Your email address will not be published.

Back to top button