ಹಾಸನ: ಹಾಸ್ಟೆಲ್‍ನಲ್ಲಿ (Hostel) ನೇಣು ಬಿಗಿದುಕೊಂಡು ವಿದ್ಯಾರ್ಥಿಯೊಬ್ಬ (Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ಮಹಮ್ಮದ್ ಕೈಫ್ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಮಹಮ್ಮದ್ ಕೈಫ್ ಕೆಲ್ಲೂರು ಗ್ರಾಮದ ಮಹಮ್ಮದ್ ಷರೀಪ್ ಎಂಬುವವರ ಪುತ್ರನಾಗಿದ್ದು, ಈತ 9ನೇ ತರಗತಿ ಓದುತ್ತಿದ್ದ.
ಆದರೆ ಮಹಮದ್ ಕೈಫ್ ಹಲವಾರು ಬಾರಿ ಹಾಸ್ಟೆಲ್‍ನಿಂದ ಮನೆಗೆ ವಾಪಸ್ ಬಂದಿದ್ದ. ಆದರೂ ಆತನ ಪೋಷಕರು ವಿದ್ಯಾರ್ಥಿಯನ್ನು ಪುನಃ ಹಾಸ್ಟೆಲ್‍ಗೆ ಬಿಟ್ಟು ಬಂದಿದ್ದರು. ಆದರೆ ನಿನ್ನೆ ಸಂಜೆ ಮಂಚಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಕರೆಂಟ್ ಬಿಲ್ ನೋಡಿ ಕೂಲಿ ಕಾರ್ಮಿಕ ಕಂಗಾಲು
ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಾಗೂ ಘಟನೆಯ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಗಳಿಗೆ ಗಾಯ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಜೀವಂತ ಏಡಿಯನ್ನೇ ತಿಂದ ವ್ಯಕ್ತಿ ಆಸ್ಪತ್ರೆ ಸೇರಿದ