Bengaluru CityDistrictsKarnatakaLatestLeading NewsMain Post

ಕರೆಂಟ್ ಬಿಲ್ ನೋಡಿ ಕೂಲಿ ಕಾರ್ಮಿಕ ಕಂಗಾಲು

ಬೆಂಗಳೂರು: ಪ್ರತಿ ತಿಂಗಳು 300, 400 ರೂಪಾಯಿ ಬರುತ್ತಿದ್ದ ಕರೆಂಟ್ ಬಿಲ್ (Current Bill) ಏಕಾಏಕಿ 22 ಸಾವಿರ ರೂ. ಬಂದಿದ್ದು, ಇದನ್ನು ನೋಡಿದ ಕೂಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಶಾಕ್ ಆಗಿದ್ದಾರೆ.

ಹೌದು.. ಈ ಘಟನೆ ಬೆಂಗಳೂರಿನ (Bengaluru) ಬನ್ನೇರುಘಟ್ಟ ರೋಡ್‍ನ ದೊಡ್ಡ ಕಮ್ಮನಹಳ್ಳಿಯ 15ನೇ ಕ್ರಾಸ್‍ನಲ್ಲಿ ನಡೆದಿದೆ. 15ನೇ ಕ್ರಾಸ್‍ನ ನಿವಾಸಿ ರಾಜು ಎಂಬಾತ ಕೂಲಿ ಕೆಲಸ ಮಾಡಿಕೊಂಡು ಶೀಟಿನ ಮನೆಯಲ್ಲಿ ವಾಸವಿದ್ದರು. ಇಷ್ಟು ವರ್ಷಗಳಲ್ಲಿ ರಾಜುಗೆ ಪ್ರತಿ ತಿಂಗಳು 200, 300ರೂ. ಬರುತ್ತಿದ್ದ ಕರೆಂಟ್ ಬಿಲ್ 9, 10ನೇ ತಿಂಗಳಲ್ಲಿ ಸಾವಿರಾರು ರೂಪಾಯಿ ಬರೋಕೆ ಶುರುವಾಗಿದೆ.

2022ರ ಫೆಬ್ರವರಿ ಬಂದ ಬಿಲ್- 219 ರೂ., ಮಾರ್ಚ್ ತಿಂಗಳಲ್ಲಿ ಬಂದ ಕರೆಂಟ್ ಬಿಲ್ 241 ರೂ. ಜೂನ್ ತಿಂಗಳಲ್ಲಿ 265 ರೂ. ಜುಲೈನಲ್ಲಿ 419 ರೂ. ಆಗಸ್ಟ್‌ನಲ್ಲಿ 348 ರೂ. ಸೆಪ್ಟೆಂಬರ್ ತಿಂಗಳಿಗೆ ಮಾತ್ರ 22 ಸಾವಿರ ರೂ. ಕರೆಂಟ್ ಬಿಲ್‍ನ್ನು ಬೆಸ್ಕಾಂ ನೀಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಮತ್ತೆ 500 ರೂ. ಸೇರಿಸಿ 23 ಸಾವಿರ ಕಟ್ಟುವಂತೆ ಬಿಲ್ ಬಂದಿದೆ. ಬಿಲ್ ನೋಡಿ ಕಂಗಾಲಾದ ರಾಜು ಬೆಸ್ಕಾಂ ಕಚೇರಿಗೆ ದೂರು ನೀಡಲು ಹೋಗಿದ್ದಾರೆ. ಆದರೆ ಅಲ್ಲಿ ತಪ್ಪಾಗಿ ಬಿಲ್ ಕೊಟ್ಟಿರೋದಲ್ಲದೇ ಪೂರ್ತಿ ಹಣ ನೀಡುವಂತೆ ಬೆಸ್ಕಾಂ ಸಿಬ್ಬಂದಿ ಒತ್ತಾಯ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಪೆಟ್ರೋಲ್‌, ಡೀಸೆಲ್‌ ದರ 40 ಪೈಸೆ ಇಳಿಕೆ – 7 ತಿಂಗಳ ಬಳಿಕ ದರ ಕಡಿತ

ಇದೀಗ ರಾಜು ಬೆಸ್ಕಾಂ (BESCOM) ಸಿಬ್ಬಂದಿ ಬಳಿ ನಮ್ಮದು ಶೀಟ್ ಮನೆ, ನಾವು ಇರೋದು ಬಿಟ್ಟು ಬೇರೆ ಯಾವುದೇ ಕಮರ್ಷಿಯಲ್ ಕೆಲಸ ನಡೆಯಲ್ಲ. ನಾವು ಬಡವರು ನಾವು ಹೇಗೆ ಅಷ್ಟೊಂದು ಹಣ ನೀಡಲು ಸಾಧ್ಯ ಎಂದು ಪ್ರಶ್ನೆ ಮಾಡ್ತಿದ್ದಾರೆ. ಇದನ್ನೂ ಓದಿ: 29 ಹೊಸ PU ಕಾಲೇಜುಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಅಸ್ತು

Live Tv

Leave a Reply

Your email address will not be published. Required fields are marked *

Back to top button