ನವದೆಹಲಿ: ವಾಹನ ಸವಾರರಿಗೆ ಸಿಹಿಸುದ್ದಿ. ಪೆಟ್ರೋಲ್, ಡೀಸೆಲ್ (Petrol, Diesel) ದರ ಪ್ರತಿ ಲೀಟರ್ 40 ಪೈಸೆ ಇಳಿಕೆಯಾಗಿದೆ.
ಪರಿಷ್ಕೃತ ದರ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ. ಕಳೆದ 6 ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿಯಲ್ಲಿತ್ತು. ಏಪ್ರಿಲ್ 7 ರಂದು ಕೊನೆಯ ಬಾರಿಗೆ ದರ ಕಡಿತಗೊಂಡಿತ್ತು. ಇದನ್ನೂ ಓದಿ: ಬೆಳಗಾವಿಯಲ್ಲಿ ಕ್ರಿಕೆಟ್ ದೇವರು – ಗೂಡಂಗಡಿಯಲ್ಲಿ ಟೀ ಸವಿದ ತೆಂಡೂಲ್ಕರ್
Advertisement
Advertisement
ಇಳಿಕೆ ಯಾಕೆ?
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ (International Crude Oil Prices) ಕೆಲ ದಿನಗಳಿಂದ 95 ಡಾಲರ್ ಅಸುಪಾಸಿನಲ್ಲಿದೆ. ಸೋಮವಾರ ಬ್ರೆಂಟ್(Brent) ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 92 ಡಾಲರ್(7,600 ರೂ.) ಇತ್ತು. ಈ ವರ್ಷದ ಆರಂಭದಲ್ಲಿ ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಒಂದು ಬ್ಯಾರೆಲ್ ಕಚ್ಚಾ ತೈಲದ ದರ 139 ಡಾಲರ್‌ಗೆ ಏರಿಕೆಯಾಗಿತ್ತು.
Advertisement
ಬೆಂಗಳೂರಿನಲ್ಲಿ ಎಷ್ಟು?
ಈ ಮೊದಲು 1 ಲೀಟರ್ ಪೆಟ್ರೋಲ್ ದರ 101.94 ರೂ. ಪೈಸೆ ಇದ್ದರೆ ಡೀಸೆಲ್ ದರ 87.89 ರೂ. ಇತ್ತು. ಈಗ ಪೆಟ್ರೋಲ್ ದರ 101.54 ರೂ. ಡೀಸೆಲ್ ದರ 87.49 ರೂ.ಗೆ ಇಳಿಕೆಯಾಗಿದೆ.