DistrictsKarnatakaKodaguLatestMain Post

ಕೇಸರಿ ಶಲ್ಯ ಧರಿಸಿದ್ದಕ್ಕೆ ಹಾಸ್ಟೆಲ್‍ನಲ್ಲಿ ಹಲ್ಲೆ- ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

Advertisements

ಮಡಿಕೇರಿ: ಕೇಸರಿ ಶಲ್ಯ ಧರಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಾಸ್ಟೆಲ್ ಸ್ನೇಹಿತರಿಂದಲೇ ಹಲ್ಲೆ ನಡೆದಿತ್ತು. ಇದರಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಅಂತೋಣಿ ಪ್ರಜ್ವಲ್ ಆತ್ಮಹತ್ಯೆಗೆ ಯತ್ನಿಸಿರುವ ವಿದ್ಯಾರ್ಥಿ. ಈತ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಅಂತೋಣಿ ಕೇಸರಿ ಶಾಲು ಧರಿಸಿದ ಹಿನ್ನೆಲೆಯಲ್ಲಿ ಆತನ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ, ಓರ್ವನ ಮಾತ್ರ ವಿಚಾರಣೆ ಮಾಡಲಾಗಿತ್ತು.

ಇದರಿಂದ ಮನನೊಂದ ಅಂತೋಣಿ ತನಗೆ ಸೂಕ್ತ ನ್ಯಾಯ ಲಭಿಸಿಲ್ಲ ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಸ್ನೇಹಿತರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದ. ಸಕಾಲದಲ್ಲಿ ಅಂಥೋಣಿಯನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಪ್ರಕರಣ ಸಂಬಂಧ ಕುಶಾಲನಗರ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.

ಹಾಸ್ಟೆಲ್‍ನಲ್ಲಿ ಅನ್ಯ ಕೋಮಿನವರಿಂದ ಭಯದ ಹಾಗೂ ಆತಂಕ ಇದೆ. ವಾರ್ಡ್‍ನ್‍ನಿಂದಲೂ ತಾರತಮ್ಯ, ಬೆದರಿಕೆ ಆರೋಪ ಇದೆ ಎಂಬ ಆರೋಪ ಈಗ ಕೇಳಿ ಬಂದಿದೆ.

ಘಟನೆಯೇನು?: ಕುಶಾಲನಗರ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿ ಅಂತೋಣಿ ಪ್ರಜ್ವಲ್ ಎಂಬಾತ ನಿನ್ನೆ ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಹೋಗುವಾಗ ಮುಸ್ಲಿಂ ವಿದ್ಯಾರ್ಥಿನಿ ನಿಂದನೆ ಮಾಡಿಮ ನೀನ್ಯಾಕೆ ಕೇಸರಿ ಶಾಲು ಹಾಕಿಕೊಂಡಿದ್ದೀಯಾ ಎಂದು ಕೇಳಿದ್ದಳಂತೆ. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

ಇದರಿಂದ ಸಿಟ್ಟಿಗೆದ್ದಿದ್ದ ವಿದ್ಯಾರ್ಥಿ ಆಕೆ ವಿರುದ್ಧ ಬೈದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಅಂತೋಣಿ ಪ್ರಜ್ವಲ್‌ನ ಹಾಸ್ಟೆಲ್‌ನ ಮುಸ್ಲಿಂ ಸ್ನೇಹಿತರು ಆತ ಹಾಸ್ಟೆಲ್‌ಗೆ ಹೋದಾಗ ಹೊಡೆದಿದ್ದಾರೆ ಎನ್ನಲಾಗಿದೆ. ಕೂಡಲೇ ಅಂತೋಣಿ ಪ್ರಜ್ವಲ್ ಹಿಂದೂಪರ ಸಂಘಟನೆಗಳ ಮುಖಂಡರಿಗೆ ಕರೆಮಾಡಿ ಹೇಳಿದ್ದಾನೆ. ಹೀಗಾಗಿ ಹಾಸ್ಟೆಲ್‌ಗೆ ಹೋದ ಹಿಂದೂಪರ ಸಂಘಟನೆಗಳ ಮುಖಂಡರು ಅಂತೋಣಿ ಪ್ರಜ್ವಲ್‌ಗೆ ಹೊಡೆದ ರಾಜಿಕ್ ಮತ್ತು ಆತನ ಸ್ನೇಹಿತರಿಗೂ ಹಾಸ್ಟೆಲ್‌ಗೆ ನುಗ್ಗಿ ಹೊಡೆದಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

Leave a Reply

Your email address will not be published.

Back to top button