ಗದಗ: ಬೀದಿ ನಾಯಿಗಳ(Street Dog) ದಾಳಿಯಿಂದ ಮಹಿಳೆಗೆ ಗಂಭೀರ ಗಾಯವಾದ ಘಟನೆ ಜಿಲ್ಲೆ ರೋಣ(Rona) ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ.
ಜನ್ನತಬೀ (45) ಗಾಯಗೊಂಡ ಮಹಿಳೆ. ಗಾಡಗೋಳಿ ಗ್ರಾಮದ ಹೊಳೆ ಆಲೂರ ರಸ್ತೆಯಲ್ಲಿ ನಾಯಿಗಳ ಕಾದಾಟ ನಡೆದಿತ್ತು. ಆ ಸಂದರ್ಭದಲ್ಲಿ ಮಹಿಳೆ ಮನೆಯಿಂದ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದರು. ಕಾದಾಡಿಕೊಂಡು ಬಂದ ಶ್ವಾನಗಳ ಗುಂಪು ಏಕಾಏಕಿ ಮಹಿಳೆಯ ಮೇಲೆ ಎರಗಿವೆ. ಈ ಪರಿಣಾಮ ಮಹಿಳೆ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ಮಹಿಳೆ ಕೆಳಗೆ ಬಿದ್ದ ಕೂಡಲೇ ನಾಯಿಗಳು ಎಲ್ಲೆಂದರಲ್ಲಿ ಕಚ್ಚಿವೆ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ರೋಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ರಂಜಾನ್ ಹಬ್ಬಕ್ಕೆ ಬೆಂಗಳೂರಿನಿಂದ ತವರೂರು ಗಾಡಗೋಳಿಗೆ ಆಗಮಿಸಿದ್ದರು. ಇದನ್ನೂ ಓದಿ: ಚಿತ್ರದುರ್ಗ| ಜಮೀನಿನ ಬದು ಬಳಿ ಬೆಂಕಿಯಿಟ್ಟ ವಿಚಾರಕ್ಕೆ ಗುಂಪು ಘರ್ಷಣೆ – ಮೂವರಿಗೆ ಗಾಯ
ಘಟನೆಯ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದರು.