ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳೇ ಸದ್ದು ಮಾಡ್ತಿರುವಾಗ ‘ಸ್ತ್ರೀ 2’ (Stree 2) ಸಿನಿಮಾದ ಯಶಸ್ಸು ಬಾಲಿವುಡ್‌ಗೆ ಮರು ಜೀವ ಕೊಟ್ಟಂತೆ ಆಗಿದೆ. 300 ಕೋಟಿ ಕಲೆಕ್ಷನ್ ಮಾಡುತ್ತ ಚಿತ್ರ ದಾಪುಗಾಲಿಡುತ್ತಿದೆ. ಇದೇ ಖುಷಿಯಲ್ಲಿ ಸಿನಿಮಾ ಯಶಸ್ಸು ಅನ್ನು ‘ಸ್ತ್ರೀ 2’ ತಂಡ ಆಚರಿಸಿದೆ. ಇದನ್ನೂ ಓದಿ:‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾಗೆ ಸಾಥ್ ನೀಡಿದ ಮಹೇಶ್ ಬಾಬು
ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ‘ಸ್ತ್ರೀ 2’ ಟೀಮ್ ಗ್ರ್ಯಾಂಡ್ ಆಗಿ ಪಾರ್ಟಿ ಮಾಡಿ ಖುಷಿಪಟ್ಟಿದೆ. ರೆಡ್ ಥೀಮ್‌ನಲ್ಲಿ ಆಯೋಜಿಸಿದ್ದ ಈ ಪಾರ್ಟಿಯಲ್ಲಿ ಕೃತಿ ಸನೋನ್, ವಿಕ್ಕಿ ಕೌಶಲ್, ತಮನ್ನಾ ಬಾಟಿಯಾ ಕೂಡ ಭಾಗಿಯಾಗಿದ್ದಾರೆ. ಅದಷ್ಟೇ ಅಲ್ಲ, ಚಿತ್ರದ ನಾಯಕಿ ಶ್ರದ್ಧಾ ಕಪೂರ್ (Shraddha Kapoor) ಜೊತೆ ಕೃತಿ ಮತ್ತು ತಮನ್ನಾ ಬಿಂದಾಸ್ ಆಗಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.
View this post on Instagram
ಅಂದಹಾಗೆ, ‘ಸ್ತ್ರೀ 2’ ಸಿನಿಮಾದ ಕಥೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ. ಬಿಡುಗಡೆಯಾದ ಈ ದಿನಗಳಲ್ಲಿ ಒಟ್ಟು 269 ಕೋಟಿ ರೂ. ಗಳಿಕೆ ಮಾಡಿದೆ. 300 ಕೋಟಿ ರೂ. ಕಲೆಕ್ಷನ್‌ನತ್ತ ಮುನ್ನಗ್ಗುತ್ತಿದೆ. ಈ ಮೂಲಕ ಶ್ರದ್ಧಾಗೂ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ ಮತ್ತು ರಾಜ್‌ಕುಮಾರ್ ರಾವ್ ನಟನೆಯ ಜೊತೆ ತಮನ್ನಾ ಐಟಂ ಡ್ಯಾನ್ಸ್ಗೆ ಫ್ಯಾನ್ಸ್ ಕಡೆಯಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ.
‘ಸ್ತ್ರೀ 2’ ಸಿನಿಮಾದ ಸಕ್ಸಸ್‌ನಿಂದ ಶ್ರದ್ಧಾ ಕಪೂರ್ ಡಿಮ್ಯಾಂಡ್‌ನಲ್ಲಿದ್ದಾರೆ. ನಟಿಗೆ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಿಂದ ಆಫರ್ ಅರಸಿ ಬರುತ್ತಿವೆ. ಅಂದಹಾಗೆ, ‘ಸ್ತ್ರೀ 2’ ಸಿನಿಮಾ ಆ.15ರಂದು ಬಿಡುಗಡೆಯಾಯಿತು.