ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ‘ಸ್ತ್ರೀ 2’ (Stree 2) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಶ್ರದ್ಧಾ ಕಪೂರ್ (Shraddha Kapoor) ಇನ್ಸ್ಟಾಗ್ರಾಂನಲ್ಲಿ ಹಿಂದಿಕ್ಕಿದ್ದಾರೆ. ಇದನ್ನೂ ಓದಿ:‘ರುದ್ರ ಗರುಡ ಪುರಾಣ’ದಲ್ಲಿ ಮಿಸ್ ಆದ ವಿಮಾನದ ಕಥೆ ಹೇಳಲಿದ್ದಾರೆ ರಿಷಿ
‘ಸ್ತ್ರೀ 2’ ಸಿನಿಮಾದ ಯಶಸ್ಸಿನ ಬಳಿಕ ಶ್ರದ್ಧಾಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಜಾಸ್ತಿಯಾಗಿದೆ. ಅದರಲ್ಲೂ ನರೇಂದ್ರ ಮೋದಿ ಅವರನ್ನು ಕೂಡ ನಟಿ ಹಿಂದಿಕ್ಕಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಶ್ರದ್ಧಾಗೆ 91.5 ಮಿಲಿಯನ್ (9.15 ಕೋಟಿ) ಜನರು ಫಾಲೋ ಮಾಡ್ತಿದ್ರೆ, ಪ್ರಧಾನಿ ಮೋದಿ ಅವರಿಗೆ 91.3 (9.13 ಕೋಟಿ) ಜನರು ಹಿಂಬಾಲಕರಿದ್ದಾರೆ.
ನರೇಂದ್ರ ಮೋದಿ ಅವರನ್ನು ಮೀರಿಸಿ ಶ್ರದ್ಧಾ 3ನೇ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು 270 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದ್ದಾರೆ.
ಇನ್ನೂ ದಕ್ಷಿಣದ ಸಿನಿಮಾಗಳೇ ಹಿಟ್ ಆಗ್ತಿರುವ ಈ ಸಮಯದಲ್ಲಿ ‘ಸ್ತ್ರೀ 2’ ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ಗೆ ಮರು ಜೀವ ಸಿಕ್ಕಂತೆ ಆಗಿದೆ. ಇದರಿಂದ ಶ್ರದ್ಧಾ ಕೆರಿಯರ್‌ಗೂ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಕಳೆದ ಕೆಲ ವರ್ಷಗಳಿಂದ ಶ್ರದ್ಧಾ ನಟಿಸಿದ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ‘ಸ್ತ್ರೀ 2’ 2ನಿಂದ ಸಕ್ಸಸ್‌ಫುಲ್ ನಟಿಯಾಗಿದ್ದಾರೆ.
‘ಸ್ತ್ರೀ 2’ ಸಿನಿಮಾದ ಸಕ್ಸಸ್‌ನಿಂದ ಶ್ರದ್ಧಾ ಕಪೂರ್ ಡಿಮ್ಯಾಂಡ್‌ನಲ್ಲಿದ್ದಾರೆ. ನಟಿಗೆ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಿಂದ ಆಫರ್ ಅರಸಿ ಬರುತ್ತಿವೆ. ಅಂದಹಾಗೆ , ‘ಸ್ತ್ರೀ 2’ ಸಿನಿಮಾ ಆ.15ರಂದು ಬಿಡುಗಡೆಯಾಯಿತು.