ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ (Stree 2) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ರಿಲೀಸ್ ಆದ 11 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 560 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ‘ಸ್ತ್ರೀ 2’ ಸಿನಿಮಾ ದಾಖಲೆ ಬರೆದಿದೆ. ಇದನ್ನೂ ಓದಿ:ರಜನಿಯಿಂದಾಗಿ ಹೊಸಬರಿಗೆ ಅವಕಾಶ ಸಿಗ್ತಿಲ್ಲ: ದೊರೈ ಸಿಡಿಸಿದ ಬಾಂಬ್
ಚಿತ್ರಮಂದಿರಲ್ಲಿ ದೆವ್ವದ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ (Shraddha Kapoor) ನಟನೆಯ ಈ ಚಿತ್ರದಿಂದ ಬಾಲಿವುಡ್‌ಗೆ ಮರುಜೀವ ಸಿಕ್ಕಂತೆ ಆಗಿದೆ. ‘ಸ್ತ್ರೀ 2’ ಚಿತ್ರವು 11 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 560 ಕೋಟಿ ರೂ. ಮತ್ತು ಭಾರತದಲ್ಲಿ 402 ಕೋಟಿ ರೂ. ಕಲೆಕ್ಷನ್ ಮಾಡಿರುವ ಬಗ್ಗೆ ಖುದ್ದು ‘ಸ್ತ್ರೀ 2’ ಸಿನಿಮಾದ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ಂಸ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
View this post on Instagram
ಈ ಸಿನಿಮಾದ ಗೆಲುವಿನಿಂದ ಶ್ರದ್ಧಾಗೂ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ ಮತ್ತು ರಾಜ್‌ಕುಮಾರ್ ರಾವ್ (Rajkumar Rao) ನಟನೆಯ ಜೊತೆ ತಮನ್ನಾ ಐಟಂ ಡ್ಯಾನ್ಸ್‌ಗೆ ಫ್ಯಾನ್ಸ್ ಕಡೆಯಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. ಅಭಿಮಾನಿಗಳು ಮುಗಿಬಿದ್ದು ಥಿಯೇಟರ್‌ನಲ್ಲಿ ಸಿನಿಮಾ ನೋಡ್ತಿದ್ದಾರೆ.
‘ಸ್ತ್ರೀ 2’ ಸಿನಿಮಾದ ಸಕ್ಸಸ್‌ನಿಂದ ಶ್ರದ್ಧಾ ಕಪೂರ್ ಡಿಮ್ಯಾಂಡ್‌ನಲ್ಲಿದ್ದಾರೆ. ನಟಿಗೆ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಿಂದ ಆಫರ್ ಅರಸಿ ಬರುತ್ತಿವೆ. ಅಂದಹಾಗೆ, ‘ಸ್ತ್ರೀ 2’ ಸಿನಿಮಾ ಆ.15ರಂದು ಬಿಡುಗಡೆಯಾಯಿತು.