ಜೆರುಸಲೇಮ್: ಸಾಮಾನ್ಯವಾಗಿ ಸ್ಟ್ರಾಬೆರಿ ತೂಕ ಎಷ್ಟಿರುತ್ತದೆ? 10 ರಿಂದ 20 ಗ್ರಾಂ? ಇನ್ನೂ ಹೆಚ್ಚೆಂದರೆ 30 ಗ್ರಾಂ ಇರಬಹುದು. ಆದರೆ ಇಲ್ಲಿ ಒಬ್ಬ ವ್ಯಕ್ತಿ ಬರೋಬ್ಬರಿ 290 ಗ್ರಾಂನ ಸ್ಟ್ರಾಬೆರಿ ಬೆಳೆದು ದಾಖಲೆ ಬರೆದಿದ್ದಾನೆ.
290 ಗ್ರಾಂ ತೂಕದ ದೈತ್ಯ ಸ್ಟ್ರಾಬೆರಿ ಬೆಳೆದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿರುವ ಘಟನೆ ಇಸ್ರೇಲ್ ದೇಶದ ಕಡಿಮಾ-ಜೋರಾನ್‌ನಲ್ಲಿ ನಡೆದಿದೆ. ಏರಿಯಲ್ ಚಾಹಿ ಈ ದೈತ್ಯ ಸ್ಟ್ರಾಬೆರಿ ಬೆಳೆದ ವ್ಯಕ್ತಿ.
ಇಸ್ರೆಲ್‌ನ ವ್ಯಕ್ತಿ ಬೆಳೆದಿರುವ ಸ್ಟ್ರಾಬೆರಿ 290 ಗ್ರಾಂ ತೂಗಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇದನ್ನು ವಿಶ್ವದ ಅತ್ಯಂತ ಭಾರವಾದ ಸ್ಟ್ರಾಬೆರಿ ಎಂದು ತಿಳಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಅಲಿಗಢ ಕಾಲೇಜಿನಲ್ಲಿ ಹಿಜಬ್ ಬ್ಯಾನ್
View this post on Instagram
ಈ ದೈತ್ಯ ಸ್ಟ್ರಾಬೆರಿಇಲಾನ್ ಪ್ರಬೇಧಕ್ಕೆ ಸೇರಿದ್ದು, ಏರಿಯಲ್‌ನ ಕುಟುಂಬದ ವ್ಯಾಪಾರ ಸಂಸ್ಥೆ ಸ್ಟ್ರಾಬೆರಿ ಇನ್ ದ ಫೀಲ್ಡ್ ಎಂಬಲ್ಲಿಂದ ಬೆಳೆಸಲಾಗಿದೆ. ಇದನ್ನೂ ಓದಿ: ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ – ಲಸಿಕೆ ಬಗ್ಗೆ ಜೊಕೊವಿಕ್‍ಗೆ ಪೂನಾವಾಲ ಸಂದೇಶ
ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ದೈತ್ಯ ಸ್ಟ್ರಾಬೆರಿಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ಮೊದಲಿಗೆ ಐಫೋನ್ ಎಕ್ಸ್ಆರ್‌ನ ತೂಕವನ್ನು ನೋಡಿ ಬಳಿಕ ಸ್ಟ್ರಾಬೆರಿಯ ತೂಕವನ್ನು ನೋಡಲಾಗಿದೆ. ಐಫೋನ್ ಕೇವಲ 194 ಗ್ರಾಂ ತೂಗಿದೆ. ಬಳಿಕ ಸ್ಟ್ರಾಬೆರಿಯ ಉದ್ದ, ಅಗಲ ಹಾಗೂ ಸುತ್ತಳತೆ ನೋಡಿದ್ದು ಅದು ಕ್ರಮವಾಗಿ 18 ಸೆಂ.ಮೀ, 4 ಸೆಂ.ಮೀ, ಹಾಗೂ 34 ಸೆಂ.ಮೀ ಇರುವುದನ್ನು ತೋರಿಸಲಾಗಿದೆ.