ಇಟಾನಗರ: ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಭಾರತ ಮತ್ತು ಚೀನಾವನ್ನು ಸಂಪರ್ಕಿಸುವ ಸ್ಟ್ರಾಟೆಜಿಕ್ ಸೇತುವೆಯು ಪ್ರವಾಹದಿಂದಾಗಿ ಕೊಚ್ಚಿಹೋದ ಘಟನೆ ನಡೆದಿದೆ.
ಕೊರೊರು ಗ್ರಾಮದ ಬಳಿ ಓಯಾಂಗ್ ನದಿಯ ಮೇಲೆ ಇರುವ ಸೇತುವೆಯು ಜಿಲ್ಲಾ ಕೇಂದ್ರವಾದ ಕೊಲೊರಿಂಗ್ ಅನ್ನು ಡಾಮಿನ್‍ನೊಂದಿಗೆ ಸಂಪರ್ಕಿಸುತ್ತಿತ್ತು. ಇದು ಭಾರತ-ಚೀನಾ ಗಡಿಯಲ್ಲಿ ಪ್ರಮುಖ ಕೊಂಡಿಯಾಗಿದೆ.
Advertisement
Advertisement
ಬಿಆರ್‌ಓದ ಪ್ರಾಜೆಕ್ಟ್ ಅರುಣಾಂಕ್ ಮುಖ್ಯ ಇಂಜಿನಿಯರ್ ಬ್ರಿಗ್ ಅನಿರುದ್ಧ್ ಎಸ್. ಕನ್ವರ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರವಾಹದಿಂದಾಗಿ ಕೊಲೊರಿಯಾಂಗ್-ಹುರಿ ರಸ್ತೆಯಲ್ಲಿನ ಸೇತುವೆಯು ಲೀಯಿಂದ ಸುಮಾರು ಒಂದು ಕಿ.ಮೀವರೆಗೆ ಕೊಚ್ಚಿಹೋಗಿದೆ. ಇದರ ಪರಿಣಾಮ ಎಷ್ಟಿತ್ತೆಂದರೆ ಸೇತುವೆಯ ಫಲಕವು 100 ಮೀ. ಕೆಳಗೆ ಕಾಣುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ
Advertisement
ಪ್ರಾಜೆಕ್ಟ್ ಅರುಣಾಂಕ್ ಅಡಿಯಲ್ಲಿ 756 ಬಿಆರ್‌ಟಿಎಫ್‍ನ 119 ರಸ್ತೆ ನಿರ್ಮಾಣ ಕಂಪನಿ (ಆರ್‌ಸಿಸಿ)ಯು ಈ ಸೇತುವೆಯನ್ನು ಪುನಃಸ್ಥಾಪಿಸಲು ಯೋಚಿಸಿದೆ. ಇದರ ಆದ್ಯತೆಯ ಮೇಲೆ ಕಾರ್ಯವನ್ನು ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಯಕರ್ತರೊಂದಿಗೆ ನಾಗಿಣಿ ಡ್ಯಾನ್ಸ್ ಮಾಡಿದ ಸಚಿವ ಎಂಟಿಬಿ