ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಮಕ್ಕಳಲ್ಲಿ ವಿಚಿತ್ರ ರೋಗ ಉಲ್ಬಣವಾಗಿದ್ದು, ಇದರಿಂದಾಗಿ ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್ ಆಗಿದೆ.
ರೋಗದ ಪರಿಣಾಮ ಹಸುಗೂಸುಗಳು ಸೇರಿದಂತೆ 9 ವರ್ಷದೊಳಗಿನ ಮಕ್ಕಳು ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್ ಆಗಿದ್ದು, ಬೆಡ್ ಗಳಿಲ್ಲದೇ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಪ್ರಾಣ ಬಿಟ್ಟ ಪುಟ್ಟ ಬಾಲಕಿ
ಈ ಹಿನ್ನೆಲೆ ತಾಯಿಯ ಮಡಿಲು ಹಾಗೂ ನೆಲವೇ ಮಕ್ಕಳಿಗೆ ಆಸರೆಯಾಗಿದೆ. ಆಸ್ಪತ್ರೆಯ ಎಲ್ಲಾ ವಾರ್ಡ್ ಗಳು ಭರ್ತಿಯಾಗಿರುವ ಪರಿಣಾಮ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಮಕ್ಕಳನ್ನು ದಾಖಲಿಸಿಕೊಳ್ಳಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಈ ವೇಳೆ ತೀವ್ರವಾದ ಆಯಾಸದಿಂದ ಹಸುಗೂಸುಗಳು ನಿತ್ರಾಣಗೊಳ್ಳುತ್ತಿದ್ದು ಅವರನ್ನು ನೋಡಿ ಪೋಷಕರು ಆತಂಕಗೊಂಡಿದ್ದಾರೆ.
ಈ ಪರಿಸ್ಥಿತಿ ಅರಿತ ಆರೋಗ್ಯ ಇಲಾಖೆ ಡಿಹೆಚ್‍ಓ ಡಾ.ರಂಗನಾಥ್ ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಕೋವಿಡ್ ಟೆಸ್ಟ್ ಮಾಡಿಸಿದ್ದು, ಅವರ ವರದಿ ನೆಗೆಟಿವ್ ಎಂದು ಬಂದಿದೆ. ಆದರೂ ರೋಗ ಹತೋಟಿಗೆ ಬಾರದೇ ರೋಗ ಲಕ್ಷಣ ಹೆಚ್ಚಾಗುತ್ತಿದೆ. ಈ ಪರಿಣಾಮ ಚಿತ್ರದುರ್ಗದಲ್ಲಿ ವಿಚಿತ್ರ ಸೋಂಕು ಪತ್ತೆಗಾಗಿ ಆರೋಗ್ಯ ಇಲಾಖೆ ಇದನ್ನು ನಿವಾರಿಸಲು ಹರಸಾಹಸಪಡುತ್ತಿದೆ. ಇದನ್ನೂ ಓದಿ: ಮಾಧುರಿಯ ಮಾಡೆಲಿಂಗ್ ವೀಡಿಯೋ ನೋಡಿ ಫಿದಾ ಆದ ಅನುಷ್ಕಾ ಶರ್ಮಾ
ಈ ಕುರಿತು ಪ್ರತಿಕ್ರಿಯಿಸಿದ ಡಾ.ರಂಗನಾಥ್, ಜಿಲ್ಲೆಯಲ್ಲಿ ಒಟ್ಟು 215 ಮಕ್ಕಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 12 ಮಕ್ಕಳ ಗಂಟಲು, ಮೂಗು ದ್ರಾವಣವನ್ನು ಎನ್.ಐ.ವಿ ಲ್ಯಾಬ್ ಗೆ ಕಳುಹಿಸಲಾಗಿದೆ. ಇದಕ್ಕೂ ಮೊದಲು ಕಳುಹಿಸಲಾಗಿದ್ದ 12 ಮಕ್ಕಳ ವರದಿ ಆರ್‍ಎಸ್‍ವಿ ವೈರಸ್ ಎಂದು ಪತ್ತೆಯಾಗಿದೆ. ಅದೊಂದು ಸಾಮಾನ್ಯ ರೋಗ ಲಕ್ಷಣವಾಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಕಳುಹಿಸಿರುವ ಟೆಸ್ಟ್ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ ಎಂದು ಮಾಹಿತಿನೀಡಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಡಿಸೆಂಬರ್ ನಲ್ಲಿ ಬಿಡುಗಡೆ ಸಾಧ್ಯತೆ