ಮುಂಬೈ: ಬಾಲಿವುಡ್ ಮೋಹಕ ತಾರೆ ಮಾಧುರಿ ದೀಕ್ಷಿತ್ ಮಾಡೆಲಿಂಗ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅದಕ್ಕೆ ಅನುಷ್ಕಾ ಶರ್ಮಾ ಫಿದಾ ಆಗಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ಮಾಡೆಲ್ ಫೇಸ್ ವೀಡಿಯೋ ಮಾಡುವ ಚಾಲೆಂಜಿಂಗ್ ಟ್ರೆಂಡ್ ಪ್ರಾರಂಭವಾಗಿದೆ. ಈ ಚಾಲೆಂಜ್ ಅನ್ನು ಮಾಧುರಿ ಸಹ ತೆಗೆದುಕೊಂಡಿದ್ದು, ಮಾಡೆಲ್ಫೇಸ್ ವೀಡಿಯೋವನ್ನು ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ‘ತಮಾಷೆಗಾಗಿ, ಮಾಡೆಲ್ಫೇಸ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ನಿಮ್ಮನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಡಿಸೆಂಬರ್ ನಲ್ಲಿ ಬಿಡುಗಡೆ ಸಾಧ್ಯತೆ
View this post on Instagram
ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಧುರಿ ಪೋಸ್ಟ್ ಹಂಚಿಕೊಂಡಿದ್ದು, ಕ್ವೀನ್ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಪ್ರೀತಿ ಝಿಂಟಾ, ಹುಮಾ ಖುರೇಷಿ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ.
ಮಾಧುರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಅವರು ಶೂಟಿಂಗ್ ಸಮಯ ಸೆಟ್ನಲ್ಲಿ ಮಾಡಿದ ತರಲೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅದು ಅಲ್ಲದೇ ಸೆಟ್ ನಲ್ಲಿ ಸಖತ್ ಆಕ್ಟಿವ್ ಇರುವ ಮಾಧುರಿ ತಮ್ಮ ತಂಡದ ಜೊತೆಗೆ ರೀಲ್ಸ್ ಗಳನ್ನು ಮಾಡಿ ಹಾಕುತ್ತಿರುತ್ತಾರೆ. ಇದರಿಂದ ಅವರ ಸರಳತೆ ಏನು ಎಂಬುದು ಗೊತ್ತಗುತ್ತೆ. ಖಾಸಗಿ ಶೋವೊಂದರಲ್ಲಿ ತೀರ್ಪುಗಾರರಾಗಿರುವ ಇವರು ಅಭಿಮಾನಿಗಳನ್ನು ರಂಜಿಸುವುದರಲ್ಲಿ ಯಾವಾಗಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇದನ್ನೂ ಓದಿ: ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್
ಮಾಧುರಿ ಸೂಪರ್ ಹಿಟ್ ಸಿನಿಮಾಗಳಾದ ತೇಜಾಬ್, ದೇವದಾಸ್, ದಿಲ್ ತೋ ಪಾಗಲ್ ಹೈ, ದೇವದಾಸ್, ಹಮ್ ಆಪ್ಕೆ ಹೇ ಕೌನ್, ಖಲ್ನಾಯಕ್, ಸಾಜನ್, ಬೀಟಾ, ಕೊಯ್ಲಾ, ಪುಕರ್, ಪ್ರೇಮ್ ಗ್ರಂಥ್ ಸರಣಿಗಳು ಓಟಿಟಿಯಲ್ಲಿ ಬರುತ್ತಿದ್ದು, ಅದನ್ನು ನಿರ್ದೇಶಕ ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಅದು ಅಲ್ಲದೇ ಮಾಧುರಿ ಆಗಸ್ಟ್ 15 ಹೆಸರಿನ ಮರಾಠಿ ನಾಟಕವನ್ನು ನಿರ್ಮಾಣ ಮಾಡಿದ್ದು, ಇದು ಇವರ ಚೊಚ್ಚಲ ಓಟಿಟಿ ನಿರ್ಮಾಣದ ಸಿನಿಮಾವಾಗಿದೆ. ಇದನ್ನೂ ಓದಿ: ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್