ಲಂಡನ್: 3 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಕೆಳಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಇಂಗ್ಲೆಂಡ್ ನ ಹೀಥ್ರೊ ವಿಮಾನ ನಿಲ್ದಾಣದ ಬಳಿ ಭಾನುವಾರ ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯನ್ನು ವಲಸಿಗ ಎಂದು ತಿಳಿದು ಬಂದಿದೆ.
ಕೀನ್ಯಾ ಏರ್ ವೇಸ್ ಭಾನುವಾರ ಮಧ್ಯಾಹ್ನ 3.40ಕ್ಕೆ ಹೀಥ್ರೂನಲ್ಲಿ ಲ್ಯಾಂಡ್ ಆಗಬೇಕಿತ್ತು. ಲ್ಯಾಂಡಿಂಗ್ ಗಿಯರ್ ಕಂಪಾರ್ಟ್‍ಮೆಂಟ್ ನಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿ ವಿಮಾನದಿಂದ ಜಾರಿ ಹೊರ ಬಿದ್ದಿದ್ದಾನೆ. ದಕ್ಷಿಣ ಲಂಡನ್, ಕ್ಲಾಫಮ್ ನ ಚಿಕ್ಕ ತೋಟವೊಂದರಲ್ಲಿ ವಲಸಿಗ ಬಿದ್ದು ಸಾವನ್ನಪ್ಪಿದ್ದಾನೆ. ಪ್ರತ್ಯಕ್ಷದರ್ಶಿಯ ಮೂರು ಅಡಿಯ ಅಂತರದಲ್ಲಿಯೇ ಬಿದ್ದಿದ್ದಾನೆ. ಲ್ಯಾಂಡಿಂಗ್ ಗಿಯರ್ ಕಂಪಾರ್ಟ್‍ಮೆಂಟ್ ನಲ್ಲಿ ನೀರು, ಆಹಾರ ವಸ್ತುಗಳು ದೊರಕಿವೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿ, ನಾನು ಕುಳಿತ ಸ್ಥಳದಿಂದ ಮೂರು ಅಡಿ ಅಂತರದಲ್ಲಿಯೇ ಆತ ಬಿದ್ದನು. ಕೆಳಮುಖವಾಗಿ ತೋಟದ ಕಾರಿಡಾರ್ ನಲ್ಲಿ ಬಿದ್ದಿದರಿಂದ ಮುಖವೆಲ್ಲ ಅಪ್ಪಚ್ಚಿಯಾಗಿ ಗಾರ್ಡನ್ ತುಂಬ ರಕ್ತ ಚೆಲ್ಲಿತ್ತು ಎಂದು ಹೇಳಿದ್ದಾರೆ.
Advertisement
ಇದೇ ವೇಳೆ ಮಾತನಾಡಿದ ಸ್ಥಳೀಯ ಮಹಿಳೆ, ವ್ಯಕ್ತಿ ಮೇಲಿಂದ ಬಿದ್ದಾಗ ಕಟ್ಟಡ ಕಾಮಗಾರಿಯ ಸದ್ದು ಅಂತ ಮೊದಲು ತಿಳಿದಿದ್ದೆ. ಇದೊಂದು ಭಯಾನಕ ಘಟನೆಯಾಗಿದ್ದು, ಹಸಿರು ಹುಲ್ಲಿಗಾವಲು ರಕ್ತಮಯವಾಗಿತ್ತು ಎಂದು ತಿಳಿಸಿದ್ದಾರೆ.
Advertisement
ನನ್ನ ಪತಿ ಕುಳಿತ ಸ್ಥಳದಿಂದ ಕೆಲ ಅಂತರದಲ್ಲಿಯೇ ಆ ವ್ಯಕ್ತಿ ಬಿದ್ದ. ಅದೃಷ್ಟವಷಾತ್ ನನ್ನ ಪತಿಗೆ ಏನು ಆಗಿಲ್ಲ. ಆತ ಬಿದ್ದಾಗ ಪತಿ ಒಂದು ಕ್ಷಣ ಭಯಭೀತರಾಗಿದ್ದರು. ವ್ಯಕ್ತಿ ಬಿದ್ದ ಸದ್ದಿಗೆ ನೆರೆಹೊರೆಯವರು ಆಗಮಿಸಿದರು ಎಂದು ಪ್ರತ್ಯಕ್ಷದರ್ಶಿ ಪತ್ನಿ ಘಟನೆಯನ್ನು ವಿವರಿಸಿದರು.