ಉಜಿರೆ (Ujire) ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ (Soujanya) ಅತ್ಯಾಚಾರ ಮತ್ತು ಕೊಲೆ ಕೇಸ್ ಇದೀಗ ಸಿನಿಮಾ ರೂಪದಲ್ಲಿ ಬರಲಿದೆಯಾ? ಅಂಥದ್ದೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಸೌಜನ್ಯ ಕೇಸ್ ಇಟ್ಟುಕೊಂಡು ಸಿನಿಮಾ ಮಾಡಲು ಲವ ಎನ್ನುವವರು ಹೊರಟಿದ್ದು, ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ಗಾಗಿ ಅವರು ಅರ್ಜಿ ಸಲ್ಲಿಸಿದ್ದಾರೆ.
Advertisement
ಜಿ.ಕೆ. ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಟೈಟಲ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ‘ಸ್ಟೋರಿ ಆಫ್ ಸೌಜನ್ಯಾ’ (Story of Soujanya) ಶೀರ್ಷಿಕೆಯನ್ನು ಕೊಡುವಂತೆ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಅರ್ಜಿಯಲ್ಲಿ ಸಲ್ಲಿಕೆಯಾದಂತೆ ಇದೊಂದು ಸಾಮಾಜಿಕ ಕಥಾ ಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.
Advertisement
Advertisement
2018ರಲ್ಲಿ ಕಾಲೇಜಿನಿಂದ ಮನೆಗೆ ಬರುತ್ತಿದ್ದ ಸೌಜನ್ಯಾ ಅಕ್ಟೋಬರ್ 9ರಂದು ಅಪಹರಣಕ್ಕೆ ಒಳಗಾಗುತ್ತಾಳೆ. ಅದೇ ದಿನ ರಾತ್ರಿಯೇ ಆಕೆ ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಾಗುತ್ತದೆ. ಅಕ್ಟೋಬರ್ 10ರಂದು ಈ ಬಾಲಕಿ ಶವವಾಗಿ ಧರ್ಮಸ್ಥಳದ (Dharmasthala) ಮಣ್ಣಸಂಖದಲ್ಲಿ ಪತ್ತೆಯಾಗುತ್ತಾಳೆ. ಅತ್ಯಾಚಾರದ ನಂತರ ಈಕೆಯನ್ನು ಕೊಲೆ ಮಾಡಲಾಗಿದೆ ಎಂದು ನಂತರ ಪೊಲೀಸ್ ತನಿಖೆಯಿಂದ ತಿಳಿದು ಬರುತ್ತದೆ.
Advertisement
ಮೊನ್ನೆಯಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಸಂತೋಷ್ ರಾವ್ ಎನ್ನುವವರನ್ನು ಮಾನ್ಯ ನ್ಯಾಯಾಲಯ ನಿರ್ದೋಷಿ ಎಂದು ಆದೇಶ ನೀಡಿದೆ. ಹಾಗಾಗಿ ಮತ್ತೆ ಸೌಜನ್ಯಾಳ ಸಾವು ಮುನ್ನೆಲೆಗೆ ಬಂದಿದೆ. ಈ ಪ್ರಕರಣವನ್ನು ಮರುತನಿಖೆ ನಡೆಸಬೇಕು ಎಂದು ಆಕೆಯ ಕುಟುಂಬಸ್ಥರೂ ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಸೌಜನ್ಯಾಳ ಕಥೆಯನ್ನು ಸಿನಿಮಾ ಮಾಡಲು ಚಿತ್ರತಂಡ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
Web Stories