`ಕೆಜಿಎಫ್ 2′( KGF 2) ಆದ್ಮೇಲೆ ಯಶ್ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್(Yash) ಮುಂದಿನ ನಡೆಯೇನು ಎಂಬುದರ ಬಗ್ಗೆ ಚಿತ್ರರಸಿಕರು ಕ್ಯೂರಿಯಸ್ ಆಗಿದ್ದಾರೆ. ಇನ್ನೂ ಯಶ್ ಇದೇ ದಸರಾಗೆ ಅಧಿಕೃತ ಅಪ್ಡೇಟ್ ಕೊಡಲು ರೆಡಿಯಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಕೆಜಿಎಫ್ ಪಾರ್ಟ್ 1 ಮತ್ತು ಪಾರ್ಟ್ 2 ಬಂದ ಮೇಲೆ ಯಶ್ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗ ಯಶ್ ಮುಂದಿನ ಸಿನಿಮಾ ಬಗ್ಗೆ ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ರಾಕಿಭಾಯ್ ಮುಂದಿನ ಚಿತ್ರದ ಸಖತ್ ನಿರೀಕ್ಷೆಯಿದೆ. ಸದ್ಯ ಯಶ್, ಕಾಲಿವುಡ್ ನಿರ್ದೇಶಕ ಶಂಕರ್ (Director Shankar) ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.
`ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ತಮಿಳಿನ ನಿರ್ದೇಶಕ ಶಂಕರ್ ಅವರ ಐತಿಹಾಸಿಕ ಸಿನಿಮಾಗೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 1000 ಕೋಟಿ ಬಜೆಟ್ನಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಯಶ್ ಡಿಫರೆಂಟ್ ರೋಲ್ನಲ್ಲಿ ಮಿಂಚಲಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ
ಎಸ್. ವೆಂಕಟೇಶನ್ ಬರೆದಿರೋ `ವೇಲ್ಪರಿ’ ಹಿಸ್ಟಾರಿಕಲ್ ಕಾದಂಬರಿಯಲ್ಲಿ ಯಶ್ ನಟಿಸೋದು ಪಕ್ಕಾ ಎನ್ನಲಾಗುತ್ತಿದೆ. ಯಶ್ ಮತ್ತು ಶಂಕರ್ ಕಾಂಬಿನೇಷನ್ ಸಿನಿಮಾಗೆ ಕರಣ್ ಜೋಹರ್(Karan Johar) ಬಂಡವಾಳ ಹೂಡಲಿದ್ದಾರೆ. 1000 ಕೋಟಿ ವೆಚ್ಚದಲ್ಲಿ ಬಹುಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ.