ಬೆಂಗಳೂರು: ಕೂದಲು ಚೆನ್ನಾಗಿ ಬರಲಿ ಅಂತಾ ದೊಡ್ಡಲಾದಮರದ ಬೇರುಗಳಿಗೆ ಕನ್ನ ಹಾಕುತ್ತಿರೋ ವಿಚಾರವೊಂದು ಬೆಳಕಿಗೆ ಬಂದಿದೆ. ವಿಶೇಷ ಏನಪ್ಪ ಅಂದ್ರೆ ಕೂದಲು ಚೆನ್ನಾಗಿ ಬರೋದು ಇರಲಿ ಇರೋ ಬರೋ ಕೂದ್ಲೆಲ್ಲ ಉದುರಿ ಬೊಕ್ಕತನ ಸಮಸ್ಯೆ ಎದುರಾಗುತ್ತಿದೆಯಂತೆ. ಇದಕ್ಕೆ ಕಾರಣ ಮುನೇಶ್ವರನ ಮಹಿಮೆಯಂತೆ.
Advertisement
ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ಐತಿಹಾಸಿಕ ಪ್ರಸಿದ್ಧ ದೊಡ್ಡಲಾದಮರದ ಮುನೇಶ್ವರನ ಸನ್ನಿಧಾನದಲ್ಲಿ ವಿಚಿತ್ರ ವಿಸ್ಮಯ ನಡೆಯುತ್ತಿದೆಯಂತೆ. ಆಲದ ಮರದ ಎಳೆಯ ಬೇರುಗಳನ್ನು ಕೊಬ್ಬರಿ ಎಣ್ಣೆ ಜೊತೆ ಮಿಕ್ಸ್ ಮಾಡಿ ತಲೆಗೂದಲಿಗೆ ಹಂಚಿಕೊಂಡ್ರೇ, ಕೂದಲು ಉದ್ದ ಬೆಳೆಯುತ್ತೆ ಅಂತಾ ಬಹುತೇಕ ಜನ ಇದಕ್ಕಾಗಿಯೇ ಇಲ್ಲಿಗೆ ಬಂದು ಎಳೆಬೇರಿಗೆ ಕನ್ನ ಹಾಕ್ತಾರಂತೆ.
Advertisement
Advertisement
ಹೀಗೆ ತಲೆಕೂದಲಿಗೆ ಹಚ್ಚಿಕೊಂಡವರಿಗೆ ಬಹುತೇಕರಿಗೆ ಐದಾರು ದಿನದಲ್ಲಿ ಇರೋ ಬರೋ ಕೂದಲು ಉದುರೋಗುವ ಸಮಸ್ಯೆ ಎದುರಾಗುತ್ತಿದೆಯಂತೆ. ಇದಕ್ಕೆ ಕಾರಣ ಇಲ್ಲಿನ ಮುನೇಶ್ವರ ಅನ್ನೋದು ಸ್ಥಳೀಯರ ಹಾಗೂ ಅರ್ಚಕರ ನಂಬಿಕೆ. ಹೀಗಾಗಿಯೇ ಇಲ್ಲಿ ಆಲದ ಮರದ ಬೇರು ಕದ್ದವರು ಬಹುತೇಕರು ದೇವರಿಗೆ ವಾಪಾಸು ಬಂದು ತಪ್ಪುಕಾಣಿಕೆ ಹಾಕಿದ್ದಾರಂತೆ. ಇದನ್ನೂ ಓದಿ: ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ
Advertisement
ಈ ಆಲದ ಮರದ ಕೆಲ ಭಾಗ ಕೆಳಗೆ ಬಿದ್ರೂ ಜನ ಅದನ್ನು ಒಲೆ ಉರಿಸೋಕೆ ಕೂಡ ಈ ಹಿಂದಿನಿಂದಲೂ ಬಳಕೆ ಮಾಡುತ್ತಿಲ್ಲವಂತೆ. ಅಷ್ಟೊಂದು ನಂಬಿಕೆ ಜನರ ಪಾಲಿಗೆ ಇದೆ. ಆದರೆ ಬರೋ ಜನ್ರಿಗೆ ಮುನೇಶ್ವರ ಪವಾಡ ಗೊತ್ತಾಗಲ್ಲ ಅನ್ನುವ ಕಾರಣಕ್ಕೆ ಈಗ ಬೇರನ್ನು ಕಾಪಾಡೋಕೆ ಅಂತಾನೆ ಗಾರ್ಡ್‍ಗಳನ್ನು ಕೂಡ ಪ್ರತ್ಯೇಕವಾಗಿ ನೇಮಕ ಮಾಡಲಾಗಿದೆ. ಅಸಲಿಗೆ ಈ ಎಳೆಯ ಬೇರನ್ನು ಚಿವುಟೋದ್ರಿಂದ ದೊಡ್ಡಲಾದಮರ ವಿಸ್ತಾರವಾಗಿ ಬೆಳೆಯೋದಕ್ಕೂ ಕೂಡ ಕಷ್ಟವಾಗುತ್ತೆ. ಮುನೇಶ್ವರನ ಕೋಪದ ಭಯಕ್ಕಾದ್ರೂ ಬೇರು ಕಿತ್ತುಹಾಕುವುದು ಜನ ಕಡಿಮೆ ಮಾಡುವಂತಾಗಲಿ.