ರಾಮನಗರ: ಇಂದು ಅಂಗೈಯಲ್ಲೇ ಎಲ್ಲವೂ ಅನ್ನೋ ಅಷ್ಟರಮಟ್ಟಿಗೆ ಜಗತ್ತು ಬೆಳೆದು ನಿಂತಿದೆ. ಆದರೂ ಈ ಮೂಢನಂಬಿಕೆ ಮಾತ್ರ ಇನ್ನೂ ಜೀವಂತವಾಗಿದೆ. ಗ್ರಾಮಕ್ಕೆ ಕೇಡಾಗುತ್ತದೆಯೆಂದು ಹೆದರಿ 20 ದಿನದ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮದ ಹೊರಗಿಟ್ಟಿರುವ ಘಟನೆ ನಡೆದಿದೆ.
ಹೌದು. ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೌಢ್ಯತೆಯ ಅನಾವರಣವಾಗಿದೆ. ಇಲ್ಲಿ ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನ 2 ತಿಂಗಳು 3 ದಿನ ಊರ ಹೊರಗಿಟ್ಟು ಮೌಢ್ಯತೆಯ ಪರಮಾವಧಿ ಮೀರಿದ್ದಾರೆ.
Advertisement
Advertisement
ಗ್ರಾಮದ ಶ್ರೀರಂಗಪ್ಪ ದೇವರಿಗಾಗಿ ಈ ಮೌಢ್ಯತೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಉಲ್ಲಂಘಿಸಿದ್ರೇ ಗ್ರಾಮಕ್ಕೆ ಕೇಡಾಗುತ್ತೆ ಅನ್ನೋ ನಂಬಿಕೆ ಇಲ್ಲಿನ ಜನರನ್ನು ಆವರಿಸಿದೆ. ಈ ಮೌಢ್ಯ ಆಚರಣೆ ಕೇವಲ ಬಾಣಂತಿಯರಿಗೆ ಮಾತ್ರವಲ್ಲ, ಋತುಮತಿಗಳಿಗೆ ಹಾಗೂ ದೊಡ್ಡವರಾಗುವ ಬಾಲಕಿಯರಿಗೂ ಅನ್ವಯಿಸುತ್ತೆ. ಇವರಿಗಾಗಿ ಗ್ರಾಮದ ಹೊರಗೆ ಕೆಲವು ಕೊಠಡಿಗಳನ್ನು ನಿರ್ಮಿಸಿದ್ದಾರೆ. ತಮ್ಮ ದಿನದ ಅವಧಿ ಮುಗಿಯುವರೆಗೂ ಅವರು ಅಲ್ಲೇ ವಾಸವಿರಬೇಕು. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ
Advertisement
Advertisement
ಲೆಕ್ಕ ಹಾಕಿದರೆ ದೇವರದೊಡ್ಡಿ ಗ್ರಾಮದಲ್ಲಿ ಕೇವಲ 100 ರಿಂದ 139 ಮನೆಗಳಿವೆ. ರಾಜಧಾನಿಯಿಂದ ಕೇವಲ 45 ಕಿ.ಮೀ ದೂರ. ರಾಜಧಾನಿಯಲ್ಲಿ ಆಧುನೀಕತೆ ಅಬ್ಬರವಿದ್ದರೆ ಈ ಗ್ರಾಮದಲ್ಲಿ ಮೌಢ್ಯತೆ ಮನೆ ಮಾಡಿರೋದು ಮಾತ್ರ ವಿರ್ಪಯಾಸವೇ ಸರಿ. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು