ಚಂಡೀಗಢ: ಫೇಸ್ ಬುಕ್ ನಲ್ಲಿ ಪ್ರೀತಿಯಾಗಿ ಈಗ 27ರ ಯುವಕ ಮತ್ತು 65ರ ಅಜ್ಜಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ರೀತಿ ವಿಶಿಷ್ಟವಾದ ಮದುವೆ ಹರಿಯಾಣದ ಕಾತಿಹಾಳ ಬಳಿಯ ಕುಗ್ರಾಮದಲ್ಲಿ ಗುರುವಾರ ನಡೆದಿದೆ. ವಧುವಿನ ವಯಸ್ಸು 65 ಆದರೆ ವರನ ವಯಸ್ಸು 27 ವರ್ಷವಾಗಿದೆ. ಇವರಿಬ್ಬರು ಸಿಖ್ ಸಂಪ್ರಯಾದಂತೆ ವಿವಾಹವಾಗಿದ್ದಾರೆ.
ವಧು ಕರೆನ್ ಲಿಲಿಯನ್ ಎಬ್ಬರ್ ಅವರು ಮೂಲತಃ ಅಮೆರಿಕದವರಾಗಿದ್ದು, ವರ ಪ್ರವೀಣ್ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಎಂಟು ತಿಂಗಳ ಹಿಂದೆ ಅಂದರೆ ನವಂಬರ್ ನಲ್ಲಿ ಫೇಸ್ ಬುಕ್ ಮೂಲಕ ಇವರಿಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ತಿರುಗಿತ್ತು. ಇಬ್ಬರು ಪ್ರತಿದಿನ ಚಾಟಿಂಗ್ ಮತ್ತು ವಿಡಿಯೋ ಕರೆಯನ್ನು ಮಾಡುತ್ತಿದ್ದು, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿದ್ದರು.
ಬಳಿಕ ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದು, ಇದಕ್ಕೆ ಅವರ ಕುಟುಂಬದವರು ಮತ್ತು ಸ್ನೇಹಿತರು ಒಪ್ಪಿಕೊಂಡಿದ್ದರು. ಜೂನ್ 21 ಎಬ್ಬರ್ ಅವರ ಸಹೋದರನ ಹುಟ್ಟುಹಬ್ಬವಾಗಿತ್ತು. ಆ ದಿನವೇ ಮದುವೆಯಾಗಲು ನಿರ್ಧಾರ ಮಾಡಿದ್ದರು. ಅದರಂತೆಯೇ ಜೂನ್ 15 ರಂದು ಎಬ್ಬರ್ ಭಾರತಕ್ಕೆ ಬಂದಿದ್ದರು.
ಪ್ರವೀಣ್ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದು, ಉದ್ಯೋಗ ಸಿಗದ ಕಾರಣ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ನಾನು ಪ್ರವಾಸಿ ವೀಸಾದಡಿ ಅಮೆರಿಕಾ ಬಂದಿದ್ದೇನೆ. ಪೂರ್ಣಪ್ರಮಾಣದ ವೀಸಾ ದೊರೆತರೆ ಅಮೆರಿಕದಲ್ಲಿಯೇ ನೆಲೆಸುತ್ತೇನೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಎಬ್ನರ್ ಭಾರತಕ್ಕೆ ಬರುತ್ತಾರೆ ಅವರೊಂದಿಗೇ ಉಳಿದ ಜೀವನವನ್ನು ಕಳೆಯಲು ನಿರ್ಧರಿಸಿದ್ದೇನೆ ಎಂದು ಪ್ರವೀಣ್ ಹೇಳಿದ್ದಾರೆ.