ಬೀಜಿಂಗ್: ಸ್ಮಾರ್ಟ್ ಫೋನ್ ಗಳಲ್ಲಿ ಆಂತರಿಕ ಮೆಮೊರಿ ಕಡಿಮೆ ಆಯ್ತು ಎಂದು ದೂರೋ ಮಂದಿಗೆ ಗುಡ್ ನ್ಯೂಸ್. ಚೀನಾದ ಲೆನೊವೊ ಕಂಪೆನಿ 4 ಟೆರಾ ಬೈಟ್ ಆಂತರಿಕ ಮೆಮೊರಿ ಹೊಂದಿರುವ ಫೋನನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಸಾಧಾರಣವಾಗಿ 128 ಜಿಬಿ, 256 ಜಿಬಿ, 512 ಜಿಬಿ ಫೋನ್‍ಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಲೆನೊವೊ ಈಗ ಝಡ್5 4ಟಿಬಿ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಲು ಮುಂದಾಗುತ್ತಿದೆ.
Advertisement
10 ಲಕ್ಷ ಫೋಟೋ ಮತ್ತು 2 ಸಾವಿರ ಎಚ್‍ಡಿ ಸಿನಿಮಾಗಳನ್ನು ಈ ಫೋನಿನಲ್ಲಿ ಸ್ಟೋರೇಜ್ ಮಾಡಬಹುದಾಗಿದೆ. ಈ ಫೋನ್ ಜೂನ್ 14 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ನಾಲ್ಕು ತಂತ್ರಜ್ಞಾನ ವಿಶೇಷತೆ, 18 ಪೇಟೆಂಟ್ ಹೊಂದಿರುವ ತಂತ್ರಜ್ಞಾನಗಳು ಈ ಫೋನಿನಲ್ಲಿ ಇರಲಿದೆ.
Advertisement
ಈಗಾಗಲೇ ಲೆನೊವೊ 1 ಟಿಬಿ ಆಂತರಿಕ ಮೆಮೊರಿ ಹೊಂದಿರುವ ಫೋನ್ ಬಿಡುಗಡೆ ಮಾಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಫೋನ್ ಅಂದಾಜು 93 ಸಾವಿರ ರೂ. ಬೆಲೆಯಲ್ಲಿ ಲಭ್ಯವಿದೆ. ಭಾರತಕ್ಕೆ ಇನ್ನೂ ಈ ಫೋನ್ ಬಿಡುಗಡೆಯಾಗಿಲ್ಲ.