ನವದೆಹಲಿ: ನ್ಯಾಯಾಂಗ ಪ್ರಕ್ರಿಯೆಯ ಸಂದರ್ಭದಲ್ಲಿ ವಕೀಲರೊಬ್ಬರು ಪದೇ ಪದೇ ‘ಮೈ ಲಾರ್ಡ್’ (My Lord) ಹಾಗೂ ‘ಯುವರ್ ಲಾರ್ಡ್‍ಶಿಪ್ಸ್’ (Your Lordship) ಎಂಬ ಪದ ಬಳಕೆ ಮಾಡುತ್ತಿದ್ದರಿಂದ ಬೇಸತ್ತು ಸುಪ್ರೀಂ ಕೋರ್ಟ್ (Supreme Court) ನ್ಯಾಯಾಧೀಶರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮೈ ಲಾರ್ಡ್ಸ್’ ಎಂದು ಎಷ್ಟು ಬಾರಿ ಹೇಳುತ್ತೀರಿ?. ನೀವು ಇದನ್ನು ಹೇಳುವುದನ್ನು ನಿಲ್ಲಿಸಿದರೆ, ನನ್ನ ಸಂಬಳದಲ್ಲಿ ಅರ್ಧದಷ್ಟು ಸಂಬಳ ನಿಮಗೆ ನೀಡುತ್ತೇನೆ ಎಂದು ಹಿರಿಯ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರ ಪೀಠದಲ್ಲಿ ಕುಳಿತ್ತಿದ್ದ ನ್ಯಾ. ಪಿ.ಎಸ್.ನರಸಿಂಹ ಅವರು ಹಿರಿಯ ವಕೀಲರೊಬ್ಬರಿಗೆ ತಿಳಿಸಿದ್ದಾರೆ.
ಕೋರ್ಟ್ ಕಲಾಪ ನಡೆಯುತ್ತಿರುವಾಗ ವಕೀಲರು, ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‍ಶಿಪ್ಸ್’ ಎಂದು ಸಂಬೋಧಿಸುತ್ತಾರೆ. ಅಭ್ಯಾಸವನ್ನು ವಿರೋಧಿಸುವವರು ಇದನ್ನು ವಸಾಹತುಶಾಹಿ ಮತ್ತು ಗುಲಾಮಗಿರಿಯ ಸಂಕೇತವೆಂದು ಕರೆಯುತ್ತಾರೆ.
‘ಮೈ ಲಾರ್ಡ್ಸ್’ ಹೇಳುವ ಬದಲು `ಸರ್’ ಎಂದು ಏಕೆ ಬಳಸಬಾರದು ಎಂದು ಹೇಳಿದ ನ್ಯಾ. ನರಸಿಂಹ, `ಮೈ ಲಾರ್ಡ್ಸ್’ ಎಂಬ ಪದವನ್ನು ಹಿರಿಯ ವಕೀಲರು ಎಷ್ಟು ಬಾರಿ ಉಚ್ಚರಿಸಿದ್ದಾರೆ ಎಂದು ಲೆಕ್ಕ ಹಾಕಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಕೊಡುಗೆ ಆಡಳಿತ ಪಕ್ಷಕ್ಕೆ ಹೆಚ್ಚು – ಸುಪ್ರೀಂಗೆ ಕೇಂದ್ರ ಹೇಳಿಕೆ
2006 ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾವು ಯಾವುದೇ ವಕೀಲರು, ಜಡ್ಜ್ ಅವರನ್ನು ‘ಮೈ ಲಾರ್ಡ್’ ಮತ್ತು ‘ಯುವರ್ ಲಾರ್ಡ್‍ಶಿಪ್’ ಎಂದು ಸಂಬೋಧಿಸಬಾರದು ಎಂಬ ನಿರ್ಣಯವನ್ನು ಅಂಗೀಕರಿಸಿತು.
Web Stories