ನವದೆಹಲಿ: ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ,
ದಕ್ಷಿಣ ಆಫ್ರಿಕಾ ಸೇರಿದಂತೆ ನಾಲ್ಕು ದೇಶಗಳಲ್ಲಿ ಕಾಣಿಸಿಕೊಂಡಿರುವ ಹೊಸ ತಳಿಯ ಒಮಿಕ್ರಾನ್ ಸೋಂಕು ಭಾರತದಲ್ಲೂ ತಲ್ಲಣ ಮೂಡಿಸಿದೆ. ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲಿ ವಿದೇಶಿಗಳಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ಭಾರತದಲ್ಲಿ ಮೂರನೇ ಅಲೆಯ ಭೀತಿಯ ಹೆಚ್ಚಿಸಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಅದಕ್ಕೆ ಅರವಿಂದ್ ಕೇಜ್ರಿವಾಲ್ ಅವರು ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರುವಂತೆ ಮನವಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ
Advertisement
In view of the threat from new COVID variant from African countries, we have requested experts to make a presentation to DDMA on Mon and suggest what steps we shud take. We will take all steps necessary to protect u and ur family
— Arvind Kejriwal (@ArvindKejriwal) November 26, 2021
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಕಾಣಿಸಿಕೊಂಡ ದೇಶಗಳಿರುವ ವಿಮಾನ ಹಾರಾಟವನ್ನು ನಿಷೇಧಿಸಬೇಕು ಎಂದು ಕೇಳಿಕೊಂಡಿದ್ದಾರೆ. ಕಷ್ಟಪಟ್ಟು ನಮ್ಮ ದೇಶ ಕೊರೊನಾದಿಂದ ಚೇತರಿಸಿಕೊಂಡಿದೆ. ಈ ಹೊಸ ರೂಪಾಂತರವು ಭಾರತಕ್ಕೆ ಪ್ರವೇಶಿಸುವುದನ್ನು ತಡೆಯಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
Advertisement
ಗುರುವಾರ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಈ ಹೊಸ ರೂಪಾಂತರಿಯನ್ನು ಗುರುತಿಸಿದ್ದಾರೆ. ಇಸ್ರೇಲ್ ಮತ್ತು ಬೆಲ್ಜಿಯಂನಲ್ಲೂ ಈ ಸೋಂಕು ಪತ್ತೆಯಾಗಿದೆ. ಬೋಟ್ಸ್‍ವಾನಾ ಮತ್ತು ಹಾಂಗ್‍ಕಾಂಗ್‍ನಲ್ಲೂ ಕೆಲವರಲ್ಲಿ ಈ ರೂಪಾಂತರಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ರೂಪಾಂತರಿ ಸೋಂಕು ಹೆಚ್ಚು ಕ್ಷಿಪ್ರವಾಗಿ ಹರಡಲಿದ್ದು, ವ್ಯಾಕ್ಸಿನ್ ಶಕ್ತಿಯನ್ನು 40% ಕುಂದಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಈ ರೂಪಾಂತರಿ ವೈರಸ್ ಜಾಗತಿಕ ಮಟ್ಟದಲ್ಲಿ ಹೊಸ ಸವಾಲು ತದ್ದೊಂಡಬಹುದು ಎಂಬ ಭೀತಿ ಎದುರಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮನೆಮುಂದೆ ಬಂದು ನಿಂತ ಒಂಟಿ ಸಲಗ
Advertisement
ಈಗಾಗಲೇ ಅಮೆರಿಕ ಬ್ರಿಟಿನ್ ಸೇರಿ ಹಲವು ದೇಶಗಳು ದಕ್ಷಿಣ ಆಫ್ರಿಕಾ, ಇಸ್ರೇಲ್, ಬೆಲ್ಜಿಯಂ, ಬೋಟ್ಸ್‍ವಾನಾ ಮತ್ತು ಹಾಂಗ್‍ಕಾಂಗ್ ವಿಮಾನಗಳಿಗೆ ನಿಷೇಧ ಹೇರಿವೆ. ಇನ್ನು ಗುಜರಾತ್ ಸರ್ಕಾರ ಕೂಡಾ ಯುರೋಪ್, ಯುಕೆ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ಹಾಂಕಾಂಗ್‍ನಿಂದ ಬರುವ ಎಲ್ಲ ಪ್ರಯಾಣಿಕರಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.