ವಿಜಯಪುರ: ಇಲ್ಲಿನ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಪ್ರಚಾರ ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮಹಿಳಾ ಕಾರ್ಯಕರ್ತೆ ಶಾಂತಾಗೆ ತಲೆಗೆ ಕಲ್ಲು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಸಿ.ಎಸ್ ನಾಡಗೌಡ ಪರ ಪ್ರಚಾರ (Election Campaign) ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಮುದ್ದೇಬಿಹಾಳ ಕ್ಷೇತ್ರದ ಗೋನಾಳ ಗ್ರಾಮದಲ್ಲಿ ನಡೆದ ಪ್ರಚಾರ ಕಾರ್ಯ ಕ್ರಮದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್
ಗಂಭೀರವಾಗಿ ಗಾಯಗೊಂಡ ಕಾರ್ಯಕರ್ತೆ ಶಾಂತಾ ಎಂಬಾಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ