ಮುಂಬೈ: ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ ಎಂಬ ವಿದೇಶಿ ಸಂಸ್ಥೆಯ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಸಮೂಹದ (Adani Groups) ಕಂಪನಿಗಳ ಷೇರುಗಳ (Share) ಬೆಲೆ ಭಾರೀ ಇಳಿಕೆ ಕಂಡಿದೆ.
ಅಮೆರಿಕದ ಹಿಂಡೆನ್‌ಬರ್ಗ್ (Hindenburg) ರಿಸರ್ಚ್‌ನ ವರದಿಯ ನಂತರ ಇಂದು ಒಂದೇ ದಿನ ಅದಾನಿ ಸಮೂಹ ಕಂಪನಿಯ ಮೌಲ್ಯ 46 ಸಾವಿರ ಕೋಟಿ ರೂ. ಕರಗಿದೆ. ಈ ವರದಿ ಆಧಾರ ರಹಿತ ವರದಿಯಾಗಿದೆ ಎಂದು ಅದಾನಿ ಗ್ರೂಪ್ ಪ್ರತಿಕ್ರಿಯಿಸಿದೆ.
Advertisement
ವರದಿಯಲ್ಲಿ ಏನಿದೆ?
ಎರಡು ವರ್ಷಗಳ ತನಿಖೆಯ ನಂತರ ಹಿಂಡೆನ್‌ಬರ್ಗ್ ವರದಿ ಪ್ರಕಟವಾಗಿದೆ. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿದೆ.
Advertisement
Today we reveal the findings of our 2-year investigation, presenting evidence that the INR 17.8 trillion (U.S. $218 billion) Indian conglomerate Adani Group has engaged in a brazen stock manipulation and accounting fraud scheme over the course of decades. (2/x)
— Hindenburg Research (@HindenburgRes) January 25, 2023
Advertisement
ಅದಾನಿ ಗ್ರೂಪ್‌ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ ಎಂದು ಹೇಳಿದೆ.
Advertisement
ಅದಾನಿ ಗ್ರೂಪ್ ಭಾರೀ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಷೇರು ಬೆಲೆ ಕುಸಿತ:
ಬುಧವಾರದ ವಹಿವಾಟಿನಲ್ಲಿ ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಪವರ್ ಮತ್ತು ಅದಾನಿ ವಿಲ್ಮಾರ್ ಶೇರುಗಳು ಮೌಲ್ಯ ಶೇ.1-4ರಷ್ಟು ಕುಸಿತ ಕಂಡಿವೆ. ಇದನ್ನೂ ಓದಿ: Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು
ಅದಾನಿ ಗ್ರೂಪ್ ಪ್ರತಿಕ್ರಿಯೆ ಏನು?
ನಮ್ಮ ಸಂಸ್ಥೆಯ ವಿರುದ್ಧ ಪ್ರಕಟಿಸಿದ ವರದಿ ನಮಗೆ ಆಘಾತ ತಂದಿದೆ. ಭಾರತದ ಅತ್ಯುನ್ನತ ನ್ಯಾಯಾಲಯಗಳಿಂದ ಪರೀಕ್ಷಿಸಲ್ಪಟ್ಟ ಮತ್ತು ತಿರಸ್ಕರಿಸಲ್ಪಟ್ಟ ಹಳೆಯ, ಆಧಾರರಹಿತ ಆರೋಪಗಳುನ್ನು ಆಧಾರಿಸಿ ವರದಿ ಮಾಡಲಾಗಿದೆ.
Media statement on a report published by Hindenburg Research. pic.twitter.com/ZdIcZhpAQT
— Adani Group (@AdaniOnline) January 25, 2023
ಹಣಕಾಸು ತಜ್ಞರು ಮತ್ತು ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಸಿದ್ಧಪಡಿಸಿದ ವಿವರವಾದ ವಿಶ್ಲೇಷಣೆ ಮತ್ತು ವರದಿಗಳ ಆಧಾರದ ಮೇಲೆ ಹೂಡಿಕೆದಾರ ಸಮುದಾಯವು ಯಾವಾಗಲೂ ಅದಾನಿ ಗ್ರೂಪ್‌ನಲ್ಲಿ ನಂಬಿಕೆಯನ್ನು ಇರಿಸಿದೆ. ನಮ್ಮ ತಿಳುವಳಿಕೆಯುಳ್ಳ ಮತ್ತು ಜ್ಞಾನವುಳ್ಳ ಹೂಡಿಕೆದಾರರು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಏಕಪಕ್ಷೀಯ ಆಧಾರರಹಿತ ವರದಿಗಳಿಂದ ಪ್ರಭಾವಿತರಾಗುವುದಿಲ್ಲ.
ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಪ್ರಕ್ರಿಯೆಯನ್ನು ಹಾಳು ಮಾಡುವ ದುರುದ್ದೇಶಪೂರಿತ ಪ್ರಯತ್ನ. ವರದಿಯನ್ನು ಪ್ರಕಟಿಸುವ ಮೊದಲು ಹಿಂಡೆನ್‌ಬರ್ಗ್ ರಿಸರ್ಚ್ ನಮ್ಮನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ನಮ್ಮ ಸಮೂಹ ಎಲ್ಲಾ ಕಾನೂನುಗಳನ್ನು ಪಾಲಿಸುತ್ತದೆ ಎಂದು ಹೇಳಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k