ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಖಾಸಗಿ ಶಾಲೆಗೆ ತೆರಳುತ್ತಿರುವ ಮಕ್ಕಳು ಸೇಫ್ ಅಲ್ಲ. ಏಕೆಂದರೆ ಖಾಸಗಿ ಶಾಲೆಯ ಖಾಸಗಿ ಸ್ಕೂಲ್ ವ್ಯಾನ್, ಕ್ಯಾಬ್‍ಗಳು ಡೇಂಜರ್ ಸ್ಥಿತಿಯಲ್ಲಿದೆ. ಶಾಲೆ ಹೋಗುವ ಮಕ್ಕಳನ್ನು ಕುರಿಗಳ ಮಂದೆಯಂತೆ ತುಂಬುತ್ತಿದ್ದಾರೆ. ಈ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ.
ಸ್ಥಳ – ಕನ್ನಿಂಗ್ ಹ್ಯಾಮ್ ರೋಡ್
ಸಮಯ – 4:00
ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಶಾಲಾ ವಾಹನವಾದರೆ ಆರ್ ಟಿಓ ನಿಯಮದಂತೆ ಇರುತ್ತದೆ. ಜೊತೆಗೆ ಮಕ್ಕಳ ಸಂಖ್ಯೆ ಸಹ ನಿಯಮಿತವಾಗಿರುತ್ತದೆ. ಆದರೆ ಈ ಶಾಲೆಯಲ್ಲಿ ಖಾಸಗಿ ಕ್ಯಾಬ್‍ಗಳ ಕಾರುಬಾರು ಜೋರಾಗಿದೆ. ಈ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ, ಅವರು ಹೇಳಿದ್ದು ಹೀಗೆ.
Advertisement
Advertisement
ಪ್ರತಿನಿಧಿ: ಏನ್ ಸರ್ ಇಷ್ಟೊಂದು ಸ್ಕೂಲ್ ಮಕ್ಕಳು ತುಂಬಿದ್ದೀರಾ?
ಕ್ಯಾಬ್ ಡ್ರೈವರ್: ಎಷ್ಟೊಂದು ಮೇಡಂ
ಪ್ರತಿನಿಧಿ: ಎಷ್ಟೊಂದು ಅಂತೀರಾ?
ಡ್ರೈವರ್: ಚಿಕ್ಕ ಮಕ್ಕಳು ಮೇಡಂ
ಪ್ರತಿನಿಧಿ: ಚಿಕ್ಕ ಮಕ್ಕಳು ಅಂತೀರಾ
ಡ್ರೈವರ್: ಇರಪ್ಪ ಇಳಿಸ್ತೀನಿ ಅಲ್ಲೇ ಇರೋ
ಪ್ರತಿನಿಧಿ: ಎಷ್ಟು ಜನ ಇದ್ದೀರಾ? ಯಾಕ್ ಸರ್ ಇಷ್ಟೊಂದು ಜನರನ್ನು ತುಂಬಿದ್ದೀರಾ.
ಡ್ರೈವರ್: ಹಾ ಮೇಡಂ
ಪ್ರತಿನಿಧಿ: ಇಷ್ಟೊಂದು ಜನ ತುಂಬಿದ್ದೀರಾ?
ಡ್ರೈವರ್: ಇಲ್ಲ ಮೇಡಂ ಬರೀ ಹದಿನೈದು ಜನ ಅಷ್ಟೇ?
ಪ್ರತಿನಿಧಿ: 15 ಜನನಾ? ಅಷ್ಟಾದ್ರೂ ಹೆಂಗ್ ಕುಳಿತು ಕೊಳ್ತಾರೆ? ಇಂದು ಮಗುವಿಗೆ ಎಷ್ಟು ಸರ್?
ಡ್ರೈವರ್: ಎಷ್ಟು ಮೇಡಂ 600-500 ರೂ.
ಪ್ರತಿನಿಧಿ: ನೀವ್ ಆರಾಮಾಗಿ ಕರೆದುಕೊಂಡ್ ಬಂದ್ರೆ
Advertisement
ಹೊಟ್ಟೆ ಪಾಡಿಗಾಗಿ ಕ್ಯಾಬ್ ಡ್ರೈವರ್ ಗಳು ಹೀಗೆ ಕುರಿಗಳಂತೆ ಮಕ್ಕಳನ್ನ ತುಂಬುತ್ತಾರೆ. ಆದರೆ ಪೋಷಕರು ಏನ್ ಮಾಡ್ತಾ ಇದ್ದಾರೆ. 500 ರೂ. ಕೊಟ್ಟರೆ ಈ ರೀತಿ ಕುರಿ ಗಾಡಿ, 1000 ರೂ ಕೊಟ್ಟರೆ ಕ್ಯಾಬ್ ಸಿಗುತ್ತೆ. ಇದೆಲ್ಲ ಪರಿಶೀಲಿಸದೇ ನಿಮ್ಮ ಮಕ್ಕಳನ್ನ ನೀವು ಹೀಗೆ ಕಳುಹಿಸುತ್ತಿದ್ದೀರಾ.
Advertisement
ಸ್ಥಳ – ಲಗ್ಗೆರೆ ರೋಡ್
ಸಮಯ – 3.30
ಬೆಂಗಳೂರಿನ ಲಗ್ಗೆರೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಒಮನಿ ವ್ಯಾನ್‍ಗಳಲ್ಲಿ ಮಕ್ಕಳನ್ನು ತುಂಬುತ್ತಾರೆ. ಕೂರಲು ಸೀಟ್ ಇಲ್ಲದೇ ಮಕ್ಕಳನ್ನು ಕಾಲಿಡುವ ಜಾಗದಲ್ಲಿ ಕೂರಿಸುತ್ತಾರೆ. ಈ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ಹೀಗೆ;
ಪ್ರತಿನಿಧಿ: ಏನ್ ಸರ್ ಇಷ್ಟೊಂದು ಜನ ತುಂಬಿದ್ದೀರಾ
ಡ್ರೈವರ್: ಎಷ್ಟ್ ಜನ ತುಂಬಿದ್ದಾರೆ ಮೇಡಂ?
ಪ್ರತಿನಿಧಿ: 15 ಜನ ತುಂಬಿದ್ದೀರಲ್ಲ ಸರ್
ಡ್ರೈವರ್: 15 ಜನನಾ?
ಸ್ಥಳ – ಶಿವಾನಂದ ಸರ್ಕಲ್
ಸಮಯ – 9.30
ಅಪಾಯದ ಅರಿವಿಲ್ಲದ ಮಕ್ಕಳು ಈ ಬಗ್ಗೆ ಹುಡುಕಾಟದ ಮಾತುಗಳನ್ನಾಡುತ್ತಾರೆ.
ಪ್ರತಿನಿಧಿ: ಆರ್ ಟಿಐ ರೂಲ್ಸ್ ಪ್ರಕಾರ ಹೀಗೆ ತುಂಬುವಂತಿಲ್ಲ, ನಿಮ್ಮ ವಾಹನದಲ್ಲಿ ಎಷ್ಟು ಜನ ಹೋಗುತ್ತೀರಾ?
ವಿದ್ಯಾರ್ಥಿನಿ: ನಮ್ಮ ವಾಹನದಲ್ಲಿ 6 ಜನನೇ. ಅದೇ ಬೇರೆ ವಾಹನ ನೋಡಿದ್ರೆ 15 – 20 ಜನ ಇರುತ್ತಾರೆ.
ಪ್ರತಿನಿಧಿ: ಭಯ ಆಗಲ್ವ ಹೋಗುವುದಕ್ಕೆ
ವಿದ್ಯಾರ್ಥಿನಿ: ನಾವೆಲ್ಲ ಚಿಕ್ಕವರಲ್ಲ
ರಸ್ತೆ ಹಾಗೂ ಸಾರಿಗೆ ಪ್ರಾಧಿಕಾರ ಸುಪ್ರೀಂ ಕೋರ್ಟ್ ಸಹ ಶಾಲಾ ಮಕ್ಕಳ ವಾಹನ ಸುರಕ್ಷತೆ ಬಗ್ಗೆ ನಿರ್ದೇಶನ ನೀಡಿದೆ. ಮೋಟಾರು ವೆಹಿಕಲ್ ಕಾಯ್ದೆ ಪ್ರಕಾರ ಮಕ್ಕಳ ಕುರಿಗಳಂತೆ ತುಂಬುವಂತಿಲ್ಲ. ಏನೆಲ್ಲ ನಿಯಮಗಳು ಉಲ್ಲಂಘನೆಯಾಗಿದೆ.
* ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ (ಫಸ್ಟೆಡ್ ಬಾಕ್ಸ್)
* ಮಕ್ಕಳನ್ನು ಕುರಿಗಳಂತೆ ತುಂಬಿದ್ದಾರೆ
* ಸಿಸಿಟಿವಿ ಹಾಕಿಲ್ಲ
* ಶಾಲಾ ಮಕ್ಕಳ ವಾಹನ ಎಂದು ಉಲ್ಲೇಖಿಸಿಲ್ಲ
* ಮಕ್ಕಳ ಸುರಕ್ಷತೆಯ ಕ್ರಮಗಳ ಕೈಗೊಂಡಿಲ್ಲ
12 ವರ್ಷ ಮೇಲ್ಪಟ್ಟ ಮಕ್ಕಳು ಪ್ರಯಾಣಿಸುವ ವಾಹನದ ಸೀಟ್ ಕ್ಯಾಪಸಿಟಿ ಆಧಾರದಲ್ಲಿ ಮಾತ್ರ ಪ್ರಯಾಣಿಸಬೇಕು. ಅನುಮತಿ ನೀಡಿದ ಸೀಟ್ ಗಳಲ್ಲಿ ಶೇ. ಒಂದು ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸಬೇಕು. ಕುರಿಗಳಂತೆ ತುಂಬುವಂತಿಲ್ಲ. ಒಂದೊಮ್ಮೆ ಪ್ರಯಾಣಿಸಿದರೆ ದಂಡ ಹಾಗೂ ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ಹೀಗೆ ಕುರಿಗಳಂತೆ ತುಂಬಿದು, ಕಂಡರೂ ಟ್ರಾಫಿಕ್ ಪೊಲೀಸರು ನೋಡದಂತೆ ಹೋಗುತ್ತಾರೆ. ಇದನ್ನೆಲ್ಲ ಕೇಳಬೇಕಾದ ಆರ್‍ಟಿಓ ಮಾತ್ರ ನಾಪತ್ತೆ ಆಗಿದ್ದಾರೆ.