Connect with us

Bengaluru City

ನಟ್ಟ ನಡುರಸ್ತೆಯಲ್ಲಿ ಲಾಡ್ಜ್ ರಾಣಿಯರ ಕಾಟ-ಗಂಡಸರೇ ಹುಷಾರಪ್ಪೋ ಹುಷಾರು..!

Published

on

-ಪವಿತ್ರ ಕಡ್ತಲ

ಬೆಂಗಳೂರು: ಯುವಕರೇ ,ಅಜ್ಜಂದಿರೇ, ಅಂಕಲ್ ಗಳೇ ಈಗ ತಾನೇ ಕಾಲೇಜ್ ಮೆಟ್ಟಿಲು ಹತ್ತುತ್ತಿರೋ ಚಿಗುರು ಮೀಸೆ ಹುಡುಗರೇ ಒಟ್ಟಾರೆ ಬೆಂಗಳೂರಿನಲ್ಲಿ ವಾಸವಿರುವ ಗಂಡಸರೇ ಈ ರೋಡ್‍ನಲ್ಲಿ ಓಡಾಡೋ ಮುಂಚೆ ಒಂದು ಸಲ ಯೋಚನೆ ಮಾಡಿ. ಒಂದೆರಡು ನಿಮಿಷ ಇಲ್ಲಿ ನಿಂತರು ಕೆಟ್ಟೆ ಅಂತಾನೇ ಅರ್ಥ. ನಿಮಗೆ ಶುರುವಾಗುತ್ತೆ ಆಂಟಿಯಂದಿರ ಕಾಟ. “ಹೇ ಬಾರೋ” ಅಂತಾ ಬುಟ್ಟಿಗೆ ಹಾಕಿಕೊಳ್ಳೋಕೆ ಲೇಡಿಸ್ ಅಡ್ಡಾ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ.

ನೋಡೋಕೆ ಕೊಂಚ ಅಪೀಶಿಯಲ್ ರೋಡ್ ಹಾಗೆ ಕಾಣುತ್ತದೆ. ಯಾರಿಗೂ ಗೊತ್ತೆ ಆಗದಂತೆ ಇಲ್ಲಿ ರಸ್ತೆ ರಸ್ತೆಯಲ್ಲಿ ಹುಡಗಿಯರು ಸೇಲ್‍ಗಿರ್ತಾರೆ. ಗರತಿ ಗಂಗಮ್ಮನಂತೆ ಪೋಸು ಕೊಡುವ ಆಂಟಿಯಂದಿರು ಟಾಪ್ ಪಿಂಪ್‍ಗಳು. ಇಡೀ ಅಡ್ಡಾ ಇವರ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿರುತ್ತದೆ. ಬೆಂಗಳೂರಿನ ಕೆಜಿ ರೋಡ್, ಮೈಸೂರು ಬ್ಯಾಂಕು ಸರ್ಕಲ್ ಮತ್ತು ಗಾಂಧಿನಗರ ಇವೆಲ್ಲವು ಮುಂಬೈ ರೆಡ್ ಲೈಟ್ ಏರಿಯಾದಂತೆ ಬದಲಾಗುತ್ತಿದೆ.

ಈ ಮೊದಲು ಮೆಜೆಸ್ಟಿಕ್ ಬಸ್ ನಿಲ್ದಾಣದ ಅಸುಪಾಸು ನಡೆಯುತ್ತಿದ್ದ ಈ ವೇಶ್ಯಾವಾಟಿಕೆ ದಂಧೆ ಈಗ ಈ ಮುಖ್ಯ ರಸ್ತೆಗೆ ಶಿಪ್ಟ್ ಆಗಿದೆ. ಇದರ ಬೆನ್ನತ್ತಿದ್ದ ಪಬ್ಲಿಕ್ ಟಿವಿ ಲಾಡ್ಜ್ ರಾಣಿಯರ ರಹಸ್ಯವನ್ನು ಬಟಾಬಯಲು ಮಾಡಿದೆ. ಸಿಕ್ರೇಟ್ ಪಿಂಪ್‍ಗಳ ಮುಖವನ್ನು ಬಯಲಿಗೆಳೆದಿದೆ.

ದೊಡ್ಡ ಕುಂಕುಮ ಕತ್ತಲೊಂದು ಕರಿಮಣಿ, ನತ್ತಿಗೊಂದು ಮೂಗುತಿ, ಲೈಟ್ ಕಲರ್ ಸೀರೆ. ಈ ಮೇಡಂನಾ ನೋಡಿದ್ರೆ ದೇವರಾಣೆ ಕೊಂಚನೂ ಅನುಮಾನ ಬರಲ್ಲ. ಸೈಲೆಂಟ್ ಆಗಿ ಪೋತಿಸ್ ಶೋ ರೂಂನ ಬಳಿಯ ರೋಡ್‍ನಲ್ಲಿ ನಿಂತು ಗಂಡಸರನ್ನು ಗಮನಿಸುವ ಆಂಟಿ ಮಿಕಗಳಿಗೆ ಬಲೆಹಾಕ್ತಾಳೆ. ನಮ್ಮ ಪ್ರತಿನಿಧಿ ಹತ್ತು ನಿಮಿಷ ಈ ರಸ್ತೆಯಲ್ಲಿ ನಿಂತಿದ್ದು ಅಷ್ಟೇ, ಸೊಂಟ ತಿರುಗಿಸಿಕೊಂಡು ಬಂದೇ ಬಿಟ್ಲು ನೋಡಿ. ಬಂದವಳೇ ಫೇಸ್ ರೀಡ್ ಮಾಡಿದಂಗೆ ಡೀಲ್‍ಗಿಳಿದೇ ಬಿಟ್ಟಳು. ನಾವು ವಿಚಾರಿಸೋಣ ಅಂತಾ ಅವಳ ಬಾಯಿ ಬಿಡಿಸಿದಿವಿ.

ಮಹಿಳಾ ಪಿಂಪ್ – ಎರಡು ಸಾವಿರ ಕೊಡಿ ಬನ್ನಿ
ಪ್ರತಿನಿಧಿ – ಹಾ ಎರಡು ಸಾವಿರನಾ?
ಮಹಿಳಾ ಪಿಂಪ್ – ಹಾ ಹೌದು
ಪ್ರತಿನಿಧಿ – ಫೋಟೋ ಕೊಡ್ತೀರಾ?
ಮಹಿಳಾ ಪಿಂಪ್ – ಫೋಟೋ ಎಲ್ಲಾ ಇಲ್ಲ ಅಲ್ಲೆ ಇರಬೇಕು, ಸೆಲೆಕ್ಷನ್ ಮಾಡೋಕೆ ನಾಲ್ಕು ಜನ ಇರ್ತಾರೆ
ಪ್ರತಿನಿಧಿ – ಎಲ್ಲಿ ?
ಮಹಿಳಾ ಪಿಂಪ್ – ಮಲ್ಲೇಶ್ವರಂಗೆ
ಪ್ರತಿನಿಧಿ – ಪೊಲೀಸರವರ ಪ್ರಾಬ್ಲಂ ಇಲ್ವಾ
ಮಹಿಳಾ ಪಿಂಪ್ – ಪೊಲೀಸನವರ ಪ್ರಾಬ್ಲಂ ಇಲ್ಲ
ಪ್ರತಿನಿಧಿ – ಅಲ್ಲಾ ನಮಗೆ ಭಯ ಇರುತ್ತೆ ಅಲ್ವಾ
ಮಹಿಳಾ ಪಿಂಪ್ – ಪೊಲೀಸವರನ್ನು ಹತ್ತಿರ ಬಿಟ್ಕೋತಿವಾ ನಾವು?
ಪ್ರತಿನಿಧಿ – ಏನೂ ಮನೆನಾ ಪಿಜಿನಾ ಮಲ್ಲೇಶ್ವರಂನಲ್ಲಿ
ಮಹಿಳಾ ಪಿಂಪ್ – ಮನೆನೇ –
ಪ್ರತಿನಿಧಿ – ಹೆಂಗೆ ಕರ್ಕೊಂಡು ಹೋಗ್ತೀರಾ?
ಮಹಿಳಾ ಪಿಂಪ್ – (ನಗ್ತಾ)- ಹೆಲಿಕಾಪ್ಟರ್ ನಲ್ಲಿ, ಒಂದೂವರೆ ಸಾವಿರ ಕೊಡಿ- ರೂಂ ಎಲ್ಲಾ ಸೇರಿ ಎಕ್ಸ್ಟ್ರಾ ಬೇಕಾದ್ರೇ ನೀವು ಹುಡ್ಗೀರಿಗೆ ಕೊಡಬಹುದು ಟಿಪ್ಸ್ ಅಂತಾ

ಸರಿ ಬಿಡಿ ನೋಡ್ತೀವಿ ಅಂತಾ ನಾವು ಸೈಲೆಂಟ್ ಆಗಿ ಅಲ್ಲಿಂದ ಹೊರಡೋಕೆ ನೋಡಿದಾಗ ಇನ್ನೊಂದು ಆಂಟಿ ಪಿಂಪ್ ಇದನ್ನೆಲ್ಲ ಕಳ್ಳ ಕಣ್ಣಿನಿಂದ ನೋಡುತ್ತದ್ದಳು. ಒಬ್ಬರಿಗೆ ಡೀಲ್ ಕುದುರದೇ ಇದ್ದಾಗ ಇನ್ನೊಂದು ಗುಂಪು ಅಲರ್ಟ್ ಆಗಿ ಗಿರಾಕಿಗಳನ್ನು ಬಲೆಗೆ ಹಾಕಿಕೊಳ್ಳೋಕೆ ಶುರುಮಾಡುತ್ತಾರೆ. ಅಷ್ಟರಲ್ಲಿ ಕಪ್ಪು ಬಣ್ಣದ ಮಿರಿ ಮಿರಿ ಸೀರೆ ತೊಟ್ಟು ಬ್ಯಾಗು ಹಾಕ್ಕೊಂಡ ಇನ್ನೊಂದು ಆಂಟಿ ಎಂಟ್ರಿ ಕೊಟ್ಟಳು. ಈ ಆಂಟಿಯೂ ಅಷ್ಟೇ ಹುಡುಗರನ್ನು ಸೆಳೆಯಲು ಮುಂದಾಯ್ತು.

ಪಿಂಪ್‍ಗಳು ಮಲ್ಲೇಶ್ವರಂ, ಕಲಾಸಿಪಾಳ್ಯಕ್ಕೆ ಬನ್ನಿ ಪಿಕ್ ಅಪ್ ಡ್ರಾಪು ನಮ್ಮದೇ ಅಂದ್ರೆ ಇನ್ನು ಕೆಲವು ಹುಡ್ಗೀರು ಇಲ್ಲಿ ನೀವು ಹೇಳಿದ ಜಾಗಕ್ಕೆ ಬರುತ್ತೀವಿ ಅಂತಾರೆ. ಅಷ್ಟೇ ಅಲ್ಲ ಕೆಲ ಹುಡಗಿಯರಂತೂ ಹತ್ತು ರೂಪಾಯಿಗೂ ಕೈ ಚಾಚುತ್ತಾರೆ. ಈ ಏರಿಯಾ ಕರ್ನಾಟಕದ ಸಿಂಗಂ ಅಂತಾ ಕರೆಸಿಕೊಂಡಿರುವ ರವಿ ಚೆನ್ನಣ್ಣವರ ವ್ಯಾಪ್ತಿಯೊಳಗೆ ಬರುತ್ತದೆ. ಅಸಲಿಗೆ ಇಲ್ಲಿನ ಪ್ರತಿಯೊಬ್ಬ ಪಿಂಪ್, ರಸ್ತೆ ಮದ್ಯೆ ನಿಂತಿರುವ ಹುಡಗಿಯರು ಕೂಡ ನಾವು ಪೊಲೀಸ್‍ಗೆ ಮಾಮುಲಿ ಕೊಡ್ತೀವಿ ಅಂತಾ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಸ್ಟಾಟ್‍ನಲ್ಲಿ ಹೊಯ್ಸಳ ವಾಹನ ನಿಂತಿದ್ರೂ ಇವರ ಡೀಲ್ ರಾಜರೋಷವಾಗಿ ನಡೆಯುತ್ತಿದೆ. 25 ವರ್ಷದಿಂದ ಹೊಯ್ಸಳದವರಿಗೆ ಮಾಮೂಲಿ ನೀಡುತ್ತಾ ಬಂದಿದ್ದೇನೆ ಅಂತಾ ಆಂಟಿಯರು ಹೇಳುತ್ತಾರೆ.

ಖಾಕಿ ಕೃಪಾಕಟಾಕ್ಷವಿಲ್ಲದೇ ನಡು ರಸ್ತೆಯಲ್ಲಿ ಹಿಂಗೆಲ್ಲ ಹಾಗೋದಕ್ಕೆ ಸಾಧ್ಯನೇ ಇಲ್ಲ. ಸಿಂಗಂ ಸಾಹೇಬ್ರೇ ಮೊದಲು ಈ ದಂಧೆಗೆ ಬ್ರೇಕ್ ಹಾಕಿ ಬೆಂಗಳೂರು ಮಾನ ಉಳಿಸಿ. ಮೈಮಾರುವ ಹೆಂಗಸರ ಕೈಯಿಂದ ದುಡ್ಡಿಗೆ ಕೈಚಾಚಿ ಜಾಲದ ಬೆನ್ನ ಹಿಂದೆ ನಿಂತಿರುವ ನಿಮ್ಮ ಖಾಕಿಗಳಿಗೆ ಮೊದಲು ಬುದ್ದಿ ಹೇಳಿ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *